ಕೊಡಗು : ಇಪ್ಪತ್ತು ಸಾವಿರ ಲಂಚ ಪಡೆಯುವಾಗ ಹೆಡ್ ಮಾಸ್ಟರ್ ಲೋಕ ಬಲೆಗೆ ಬಿದ್ದಿರುವ ಘಟನೆ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆಯಲ್ಲಿ ಜರುಗಿದೆ.
ಮಾಲ್ದಾರೆ ದಿಡ್ಡಳ್ಳಿ ಆಶ್ರಮ ಶಾಲೆಯ ಸಿದ್ದಲಿಂಗ ಶೆಟ್ಟಿ ಲೋಕಾಬಲೆಗೆ ಬಿದ್ದ ಹೆಡ್ ಮಾಸ್ಟರ್ ಎನ್ನಲಾಗಿದೆ. ಅತಿಥಿ ಶಿಕ್ಷಕರು ಹಾಗೂ ಅಡುಗೆ ಸಹಾಯಕರ ನೇಮಕಕ್ಕೆ ಮಾಸ್ಟರ್ ಹಣದ ಬೇಡಿಕೆ ಇಟ್ಟಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಲೋಕಾ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
DYSP ಪ್ರಕಾಶ್ ಕೆ.ಸಿ ಮಾರ್ಗದರ್ಶನದಲ್ಲಿ ಇನ್ಸೆಕ್ಟರ್ ಲೋಕೆಶ್ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : 70 ವರ್ಷದ ಮುದುಕನನ್ನು ವರಿಸಿದ 20ರ ತರುಣಿ – ನಾವುಗಳು ಮಠ ಸೇರೋದೇ ಬೆಸ್ಟು ಎಂದ ಯುವಕರು..!
Post Views: 25