Download Our App

Follow us

Home » ರಾಷ್ಟ್ರೀಯ » 70 ವರ್ಷದ ಮುದುಕನನ್ನು ವರಿಸಿದ 20ರ ತರುಣಿ – ನಾವುಗಳು ಮಠ ಸೇರೋದೇ ಬೆಸ್ಟು ಎಂದ ಯುವಕರು..!

70 ವರ್ಷದ ಮುದುಕನನ್ನು ವರಿಸಿದ 20ರ ತರುಣಿ – ನಾವುಗಳು ಮಠ ಸೇರೋದೇ ಬೆಸ್ಟು ಎಂದ ಯುವಕರು..!

ಪ್ರೀತಿ ಕುರುಡು ಎಂಬ ಪದವನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಜಾತಿ, ಧರ್ಮ, ಸೌಂದರ್ಯ, ಹಣ ಹಾಗೂ ಅಂತಸ್ತು ಯಾವುದನ್ನೂ ಲೆಕ್ಕಿಸದೆ ಪ್ರೀತಿ ಹುಟ್ಟುತ್ತದೆ. ಆದರೆ ಈಗ 20, 25 ವರ್ಷದ  ಯುವತಿಯರು ತಮ್ಮ ತಾತನ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗುವ ಟ್ರೆಂಡ್‌ ಒಂದು ಶುರುವಾಗಿದೆ. ಈ ಹಿಂದೆಯೂ ಇಂತಹ ಸಾಕಷ್ಟು ಘಟನೆಗಳ ಸುದ್ದಿಗಳು ವೈರಲ್‌ ಆಗಿದ್ದವು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, 20 ರ ತರುಣಿಯೊಬ್ಬರು 70 ವರ್ಷದ ಹಣ್ಣು ಮುದುಕನನ್ನು ಮದುವೆಯಾಗಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಕುರಿತ ವಿಡಿಯೋಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಚೆಂದುಳ್ಳಿ ಚೆಲುವೆಯೊಬ್ಬಳು 70ರ ಹರೆಯದ ಮುದುಕನನ್ನು ಮದುವೆಯಾಗಿದ್ದಾಳೆ. ಕುಟುಂಬಸ್ಥರ ಸಮ್ಮಖದಲ್ಲಿ ನಡೆದ ಈ ಮದುವೆಯಲ್ಲಿ ಮುದುಕ ಯುವತಿಯ ಕುತ್ತಿಗೆಗೆ ಹೂವಿನ ಹಾರ ಹಾಕುತ್ತಿದ್ದಂತೆ ಬಹಳ ಖುಷಿ ಖುಷಿಯಿಂದ ಯುವತಿಯು ಸಹ ಮುದುಕನಿಗೆ ಹಾರ ಬದಲಾಯಿಸಿದ್ದಾಳೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಸಾಕಷ್ಟು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದನ್ನೆಲ್ಲಾ ನೋಡಿ ಸಿಂಗಲ್‌ ಆಗಿರುವ ನನ್ನ ದುಃಖ ಇನ್ನೂ ಜಾಸ್ತಿಯಾಗ್ತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನು ಕೆಲವರು ನಾವು ಮಠ ಸೇರೋದೇ ಬೆಸ್ಟು ಎಂದು ಕಾಮೆಂಟ್ಸ್​​ ಮಾಡಿದ್ದಾರೆ.

ಇದನ್ನೂ ಓದಿ : ಗಂಗೇನಹಳ್ಳಿ ಬಿಡಿಎ ಡಿನೋಟಿಫಿಕೇಷನ್​​ ಪ್ರಕರಣ – ಲೋಕಾಯುಕ್ತ ವಿಚಾರಣೆ ಎದುರಿಸಿದ ಕೇಂದ್ರ ಸಚಿವ ಹೆಚ್​​ಡಿಕೆ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here