ಕಲಬುರಗಿ : ಬೈಕ್ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ದುಷ್ಕರ್ಮಿಗಳು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯನ್ನು ಗುಂಡಿಕ್ಕಿ ಹತ್ಯೆಗೈದಿರುವ ಭಯಾನಕ ಘಟನೆ ಜಿಲ್ಲೆಯ ಆಳಂದ ತಾಲೂಕಿನ ವಾಗ್ದಾರಿ ರಸ್ತೆಯ ಖಾನಾಪುರ ಬಳಿ ನಡೆದಿದೆ. ವಿಶ್ವನಾಥ್ ಜಮಾದಾರ (50) ಕೊಲೆಯಾದ ಮಾಜಿ ಗ್ರಾಂ ಸದಸ್ಯ.
ಬೈಕ್ನಲ್ಲಿ ಬಂದ ಇಬ್ಬರು ಹಂತಕರು ವಿಶ್ವನಾಥ್ ಜಮಾದಾರ್ಗೆ ಶೂಟ್ ಮಾಡಿ ಎಸ್ಕೆಪ್ ಆಗಿದ್ದಾರೆ. ಪಡುಸಾವಳಿಯಿಂದ ಆಳಂದ ಪಟ್ಟಣಕ್ಕೆ ಬೈಕ್ನಲ್ಲಿ ಬರುತ್ತಿದ್ದ ವಿಶ್ವನಾಥ್ನನ್ನು, ಮತ್ತೊಂದು ಬೈಕ್ನಲ್ಲಿ ಹಿಂಬಾಲಿಸಿ ಬಂದ ಹಂತಕರು ಶೂಟ್ ಮಾಡಿ ಸಾಯಿಸಿದ್ದಾರೆ.
ಸ್ಥಳಕ್ಕೆ ಕಲಬುರಗಿಯ ಎಸ್ಪಿ ಅಡೂರು ಶ್ರೀನಿವಾಸಲು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಆನ್ಲೈನ್ ಗೇಮ್ಗಾಗಿ ಅಣ್ಣನ ಮದುವೆಗಿಟ್ಟಿದ್ದ ಚಿನ್ನಾಭರಣ ಕದ್ದ ತಮ್ಮ ಅರೆಸ್ಟ್..!
Post Views: 54