ಬೆಂಗಳೂರು : ಕೆ.ಆರ್.ನಗರ ಕಿಡ್ಯ್ನಾಪ್ ಕೇಸ್ನಲ್ಲಿ ಈಗಾಗಲೇ ಜಾಮೀನನ ಮೇಲೆ ಶಾಸಕ ಎಚ್ಡಿ ರೇವಣ್ಣ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪತ್ನಿ ಭವಾನಿ ರೇವಣ್ಣ ಅವರಿಗೂ ಬಂಧನ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಭವಾನಿ ರೇವಣ್ಣ ಅವರು ಮುಂಜಾಗ್ರತಾವಾಗಿ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯ ಮಗನ ನೀಡಿದ ದೂರಿನಲ್ಲಿ ಭವಾನಿ ರೇವಣ್ಣ ಹೆಸರು ಉಲ್ಲೇಖವಾಗಿತ್ತು. ಈಗಾಗಿ ಭವಾನಿ ರೇವಣ್ಣ ಅವರಿಗೂ ಸಹ ಎಸ್ಐಟಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಆದರೆ ಭವಾನಿ ರೇವಣ್ಣ ನೋಟಿಸ್ ಗೆ ಉತ್ತರಿಸದ ಹಿನ್ನೆಲೆಯಲ್ಲಿ ಎಸ್ಐಟಿ ಎರಡನೇ ನೋಟಿಸ್ ಜಾರಿ ನೀಡಿತ್ತು.
ಈವರೆಗೆ ಕೆ.ಆರ್ ನಗರ ಕಿಡ್ನಾಪ್ ಕೇಸ್ನಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ಹೇಳಿಕೆ ಆಧಾರದ ಮೇಲೆ ಇದೀಗ ಭವಾನಿ ರೇವಣ್ಣಗೂ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನೋಟಿಸ್ ಸಿಗ್ತಿದ್ದಂತೆ ಬಂಧನ ಭೀತಿಯಿಂದ ಪಾರಾಗಲು ಭವಾನಿ ರೇವಣ್ಣ ಬೆಂಗಳೂರಿನ ಸೆಷನ್ಸ್ ಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ವಿಚಾರಣೆಗೆ ಹಾಜರಾದ ಮೇಲೆ ಸತ್ಯ ಹೊರ ಬರಲಿದೆ – ಹೆಚ್.ಡಿ ಕುಮಾರಸ್ವಾಮಿ..!