‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಎಡವಟ್ಟುಗಳನ್ನು ಮಾಡುತ್ತಲೇ ಇರುತ್ತಾರೆ. ಈ ಮೊದಲು ಹೊರಗಿನ ವಿಚಾರಗಳನ್ನು ಎಲ್ಲರ ಎದುರು ಹೇಳಿದ್ದಕ್ಕೆ ಚೈತ್ರಾಗೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈಗ ಸುದೀಪ್ ಅವರು ಮತ್ತೆ ಕ್ಲಾಸ್ ತೆಗೆದುಕೊಳ್ಳುವ ಸೂಚನೆ ಸಿಕ್ಕಿದೆ.
ಇಂದು ಕಿಚ್ಚ ಸುದೀಪ್ ವಾರದ ಪಂಚಾಯ್ತಿಗೆ ಎಂಟ್ರಿ ಕೊಡುತ್ತಲೇ ಓರ್ವ ಸ್ಪರ್ಧಿಯ ಉಸ್ತುವಾರಿ ಬಗ್ಗೆ ಮಾತಾಡುತ್ತಾ ಬಂದಿದ್ದಾರೆ. ಉಸ್ತುವಾರಿಗಳು ಜವಾಬ್ದಾರಿಗಳನ್ನು ಮರೆತು ಆಟದ ದಾರಿಯನ್ನು ತಪ್ಪುಸುತ್ತಿದ್ದಾರೆ. ಮಾತಿನ ಮಿತಿಗಳು ಮೀರುತ್ತಾ ಹೋಗುತ್ತಿವೆ ಖಡಕ್ ಡೈಲಾಗ್ ಹೊಡೆದಿದ್ದಾರೆ. ಹಾಗಾಗಿ ಚೈತ್ರಾಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುವ ಸೂಚನೆ ಸಿಕ್ಕಿದೆ.
ಮೊನ್ನೆ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ಜೋರಾಗಿತ್ತು. ತೀವ್ರ ಪೈಪೋಟಿಯಿಂದಾಗಿ ಜಿದ್ದಿಗೆ ಬಿದ್ದವರಂತೆ ಸ್ಪರ್ಧಿಗಳು ಕಚ್ಚಾಡಿಕೊಳ್ತಿದ್ದರು. ಇದರಿಂದ ಟಾಸ್ಕ್ ಪೂರ್ಣಗೊಳಿಸೋಕೆ ಇಡೀ ಮನೆ ಮಂದಿ ಕೈಚೆಲ್ಲಿ ಕುಳಿತುಕೊಂಡಿದ್ದರು. ಇದನ್ನು ನೋಡಿದ ಬಿಗ್ಬಾಸ್ ಟಾಸ್ಕ್ ಅನ್ನು ಅರ್ಧಕ್ಕೆ ರದ್ದು ಮಾಡಿದ್ದರು.
ಇದರಿಂದ ಕೆಲವು ಸ್ಪರ್ಧಿಗಳು ಚೈತ್ರಾ ಕುಂದಾಪುರ ಮೇಲೆ ಬೇಸರ ಹೊರ ಹಾಕಿದ್ದರು. ಚೈತ್ರಾ ಕುಂದಾಪುರ ಪದೇ ಪದೇ ಆಟದ ಮಧ್ಯೆ ಫೌಲ್ ಕೊಟ್ಟಿದ್ದಕ್ಕೆ, ಹಾಗೂ ಇಬ್ಬರು ಉಸ್ತುವಾರಿಗಳು ಸರಿಯಾದ ನಿರ್ಧಾರಕ್ಕೆ ಬರದಿದ್ದ ಕಾರಣಕ್ಕೆ ಟಾಸ್ಕ್ ಅರ್ಧಕ್ಕೆ ನಿಲ್ಲುವಂತೆ ಆಗಿತ್ತು. ಇದೇ ವಿಚಾರ ಬಗ್ಗೆ ಇಂದು ಕಿಚ್ಚ ಸುದೀಪ್ ಮಾತಾಡಲಿದ್ದಾರೆ. ಚೈತ್ರಾ ಕುಂದಾಪುರಗೆ ಮತ್ತೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ : ನೆಲಮಂಗಲದಲ್ಲಿ ಭೀಕರ ದುರಂತ – ‘IAST ಸಾಫ್ಟ್‌ವೇರ್’ ಕಂಪನಿ ಮಾಲೀಕ ಸೇರಿ 6 ಮಂದಿ ಸಾವು.. ಆಗಿದ್ದೇನು?