ಬೆಂಗಳೂರು : ಕರ್ನಾಟಕಕ್ಕೆ, ಅದರಲ್ಲಿಯೂ ಬೆಂಗಳೂರಿಗೆ ಹಲವು ಮೂಲಸೌಕರ್ಯ ಯೋಜನೆಗಳನ್ನು ಒದಗಿಸಿಕೊಡುವಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿಲಿಕಾನ್ ಸಿಟಿ ಜನರು ಎಂದು ಮರೆಯದ ಯೋಜನೆಗಳಿಗೆ ಮನಮೋಹನ್ ಸಿಂಗ್ ಚಾಲನೆ ನೀಡಿದ್ದು, ಅವರ ಅಧಿಕಾರಾವಧಿಯಲ್ಲಿ ಬೆಂಗಳೂರಿಗೆ ಅಪಾರ ಕೊಡುಗೆ ನೀಡಿದ್ದಾರೆ.
ಹೌದು.. ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗಲೇ 2008ರ ಮೇ 24ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಲೋಕಾರ್ಪಣೆಗೊಳಿಸಿದ್ದರು.
ವಿಮಾನ ನಿಲ್ದಾಣ ಲೋಕಾರ್ಪಣೆಯಾದ ಮೂರು ವರ್ಷಗಳ ಬಳಿಕ ಬೆಂಗಳೂರು ನಗರದ ಮೊದಲ ‘ನಮ್ಮ ಮೆಟ್ರೋ’ ಮಾರ್ಗ ಉದ್ಘಾಟಿಸಿದ್ದರು. ಅಕ್ಟೋಬರ್ 20, 2011 ರಂದು ಬೈಯಪ್ಪನಹಳ್ಳಿಯಿಂದ ಎಂಜಿ ರೋಡ್ ನಗರದ ಮೊದಲ ಮೆಟ್ರೋ ರೈಲಿಗೆ ಮನಮೋಹನ್ ಸಿಂಗ್ ಚಾಲನೆ ನೀಡಿದ್ದರು. ಇನ್ನು ಬೆಂಗಳೂರಿನ ಅನೇಕ ಮೇಲ್ಸೇತುವೆಗಳು ಮನಮೋಹನ್ ಸಿಂಗ್ ಕೊಡುಗೆಗಳಾಗಿದೆ.
ಬೆಂಗಳೂರಿನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದ ಮನಮೋಹನ್ ಸಿಂಗ್ : 6,300 ಕೋಟಿ ರೂ. ವೆಚ್ಚದ ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಮನಮೋಹನ್ ಸಿಂಗ್, ‘ಭಾರತದ ಪ್ರತಿಯೊಂದು ನಗರವು ಬೆಂಗಳೂರನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಹೆಜ್ಜೆ ಇಡುತ್ತಿವೆ. ಈ ನಗರದ ಹಿಂದಿನ ಯಶಸ್ಸನ್ನು ಗಮನದಲ್ಲಿಟ್ಟುಕೊಂಡೇ ದೃಢವಾದ, ಸಕಾರಾತ್ಮಕ ಹೆಜ್ಜೆಗಳನ್ನಿಡುತ್ತಿವೆ’ ಎಂದು ಹೇಳಿದ್ದರು.
ಇದನ್ನೂ ಓದಿ : ಬೆಂಗಳೂರು : ಡೆತ್ ನೋಟ್ ಬರೆದಿಟ್ಟು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆತ್ಮಹತ್ಯೆ..!