Download Our App

Follow us

Home » ಸಿನಿಮಾ » ಕೀರ್ತಿ ಸುರೇಶ್ ಮದುವೆಯಲ್ಲಿ ಸೋನು ಗೌಡ ಮಿಂಚಿಂಗ್​

ಕೀರ್ತಿ ಸುರೇಶ್ ಮದುವೆಯಲ್ಲಿ ಸೋನು ಗೌಡ ಮಿಂಚಿಂಗ್​

ಗೋವಾ : ಬಹುಭಾಷಾ ತಾರೆ ಕೀರ್ತಿ ಸುರೇಶ್ ವಿವಾಹ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನಟಿ ಸೋನು ಗೌಡ ಭಾಗಿಯಾಗಿ ಸಂಭ್ರಮ ಹಂಚಿಕೊಂಡಿದ್ದಾರೆ. ತಮಿಳು, ತೆಲುಗು, ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯ, ಉದ್ಯಮಿ ಆ್ಯಂಟನಿ ಥಟ್ಟಿಲ್ ಅವರನ್ನು ಗೋವಾದಲ್ಲಿ ಡಿಸೆಂಬರ್ 12 ರಂದು ಮದುವೆಯಾದರು. ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ತಮಿಳು ಸೇರಿ ಬೇರೆ ಬೇರೆ ಸಿನಿಮಾ ಇಂಡಷ್ಟ್ರಿ ತಾರೆಯರು ಭಾಗಿಯಾಗಿದ್ದರು. ಇದೀಗ ಕನ್ನಡದ ನಟಿ ಕೂಡ ಭಾಗಿಯಾಗಿರೋದು ಫೋಟೋ ಮೂಲಕ ರಿವೀಲ್ ಆಗಿದೆ.
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ಸೋನು ಗೌಡ, ತಮ್ಮ ಸ್ನೇಹಿತೆಯರ ಜೊತೆ ಗೋವಾದಲ್ಲಿ ನಡೆದ ನಟಿ ಕೀರ್ತಿ ಸುರೇಶ್ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.  ಸೋನು ಗೌಡ ಅವರು ಸೋಶಿಯಲ್ ಮಿಡಿಯಾದಲ್ಲಿ ಕೀರ್ತಿ ಸುರೇಶ್ ಮದುವೆಯಲ್ಲಿ ನವ ವಧು-ವರರ ಜೊತೆಗೆ ತೆಗೆಸಿಕೊಂಡಂತಹ ಫೋಟೊಗಳನ್ನು ಶೇರ್ ಮಾಡಿ ವಿಶ್ ಮಾಡಿದ್ದಾರೆ. ಅಂದ ಹಾಗೇ ಕೀರ್ತಿ ಸುರೇಶ್ ಮತ್ತು ಸೋನು ಗೌಡ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದು, ಹಾಗಾಗಿಯೇ ಕೀರ್ತಿ ಮದುವೆಯಲ್ಲಿ ಸೋನು ಭಾಗಿಯಾಗಿದ್ದಾರೆ. 

ಎರಡು ಸುಂದರ ಹೃದಯಗಳು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗುವುದು ತುಂಬಾ ಖುಷಿಯ ವಿಚಾರ. ಈ ಸುಂದರ ದಂಪತಿಗೆ ಮತ್ತೊಮ್ಮೆ ಹ್ಯಾಪಿ ಮ್ಯಾರೀಡ್ ಲೈಫ್, ನಿಮ್ಮ ಜೀವನ ಸುಂದರವಾಗಿರಲಿ ಎಂದು ನಟಿ ಸೋನು ಶುಭಹಾರೈಸಿದ್ದಾರೆ. 

ಬಹುಭಾಷಾ ನಟಿ ಕೀರ್ತಿ ಸುರೇಶ್​ಗೆ ಕನ್ನಡತಿ ಸೋನು ಗೌಡ ಹೇಗೆ ಪರಿಚಯ ಅನ್ನೋದನ್ನು ಈ ಹಿಂದೆಯೇ ಸೋನು ಗೌಡ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಕಾಮನ್ ಫ್ರೆಂಡ್ ಮೂಲಕ ಕೀರ್ತಿ ಸುರೇಶ್ ಪರಿಚಯವಾಗಿದ್ದು, ಇದೀಗ ಸೋನು ಅವರಿಗೂ ಕೀರ್ತಿ ಬೆಸ್ಟ್ ಫ್ರೆಂಡ್ ಆಗಿದ್ದಾರೆ. ಕೀರ್ತಿ ಅವರು ಆಹಾರ ಪ್ರಿಯೆ. ಹಾಗಾಗಿ ಆಹಾರದ ವಿಚಾರವಾಗಿ ಹೆಚ್ಚಾಗಿ ಮಾತನಾಡುತ್ತೇವೆ ಎಂದಿದ್ದರು ಸೋನು. ಹಾಗಾಗಿ ನಟಿ ಕೀರ್ತಿ ಸುರೇಶ್ ಮದುವೆಯಲ್ಲಿ ಸೋನುಗೆ ವಿಶೇಷವಾಗಿ ಆಹ್ವಾನ ನೀಡಲಾಗಿತ್ತು.

ಮದುವೆಯಲ್ಲಿ ದಳಪತಿ ವಿಜಯ್, ತ್ರಿಷಾ, ಜವಾನ್ ಡೈರೆಕ್ಟರ್ ಅಟ್ಲಿ ದಂಪತಿ, ಕಲ್ಯಾಣಿ ಪ್ರಿಯಾದರ್ಶನ್ ಸೇರಿದಂತೆ ಹಲವು ಭಾಗಿಯಾಗಿ ದಂಪತಿಗೆ ಶುಭಕೋರಿದ್ದರು.

 

Leave a Comment

DG Ad

RELATED LATEST NEWS

Top Headlines

ಜಸ್ಟ್ 18ಕ್ಕೆ ಡಿವೋರ್ಸ್​.. 43ನೇ ವಯಸ್ಸಲ್ಲಿ ಮತ್ತೆ ಹಸೆಮಣೆ ಏರಿದ ಖ್ಯಾತ ಗಾಯಕಿ..!

18ನೇ ವಯಸ್ಸಿಗೆ ಮದುವೆಯಾಗಿ ಡಿವೋರ್ಸ್​ ಪಡೆದ ಖ್ಯಾತ ಗಾಯಕಿ 43ನೇ ವಯಸ್ಸಿನಲ್ಲಿ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಾಯಕಿ ಕನಿಕಾ ಕಪೂರ್ ಉದ್ಯಮಿ ಜೊತೆ ಎರಡನೇ ಮದುವೆಯಾಗಿದ್ದಾರೆ.

Live Cricket

Add Your Heading Text Here