Download Our App

Follow us

Home » ಸಿನಿಮಾ » ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್ ಮಾಡಿಕೊಂಡು, ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ ಅಂತ ಚಂದನ್ ಕುಮಾರ್ ಬರೆದುಕೊಂಡಿದ್ದಾರೆ.

ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ​ ಖ್ಯಾತಿ ಪಡೆದುರುವ ಈ ಸ್ಟಾರ್​ ಜೋಡಿ ಚೊಚ್ಚಲ ಗಂಡು ಮಗುವಿಗೆ ವೆಲ್​​ಕಮ್​ ಹೇಳಿದ್ದಾರೆ. ಚಂದನ್ ಕುಮಾರ್ ತಮ್ಮ ಇನ್​ಸ್ಟಾದಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿ ಮಗನ ಆಗಮನದ ಖುಷಿಯನ್ನ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಗುವಿನ ಕಾಲುಗಳು ಮಾತ್ರ ಕಾಣುತ್ತಿದ್ದು, ಮಗುವಿನ ಮುಖವನ್ನು ರಿವೀಲ್ ಮಾಡಿಲ್ಲ.

ನಟಿ ಕವಿತಾ ಗೌಡ ಅವರ ಸೀಮಂತ ಅದ್ಧೂರಿಯಾಗಿಯೇ ನಡೆದಿತ್ತು. ಒಂದು ಮದುವೆ ಸಂಭ್ರಮದ ರೀತಿನೇ ಆಗಿತ್ತು. ಈ ಸೀಮಂತದ ಫೋಟೋಗಳು ಕೂಡ ಹೆಚ್ಚು ಗಮನ ಸೆಳೆದಿದ್ದರು. ಇದಕ್ಕೂ ಮೊದಲು ಚಂದನ್ ಮತ್ತು ಕವಿತಾ ಅವರ ವಿಶೇಷ ಫೋಟೋ ಶೂಟ್ ಕೂಡ ಹೆಚ್ಚು ಇಂಟ್ರಸ್ಟಿಂಗ್ ಆಗಿಯೇ ಕಾಣಿಸಿಕೊಂಡಿದ್ದವು.

ಇದನ್ನೂ ಓದಿ : ಟ್ರಿಪ್​​ಗೆ ಬಂದ್ರೆ ನಾಯಕಿ ಮಾಡ್ತೀವಿ ಎಂದಿದ್ರಂತೆ – ನಟಿ ಚೈತ್ರಾ ಆಚಾರ್ ಶಾಕಿಂಗ್ ಹೇಳಿಕೆ..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here