Download Our App

Follow us

Home » ರಾಜಕೀಯ » ಬಿಟಿವಿ ಬಳಿ ಕರ್ನಾಟಕ ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಸ್ಪೋಟಕ ಪಟ್ಟಿ – ದೊಡ್ಡ ದೊಡ್ಡವರಿಗೆ ಟಿಕೆಟ್ ಮಿಸ್ ? 

ಬಿಟಿವಿ ಬಳಿ ಕರ್ನಾಟಕ ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಸ್ಪೋಟಕ ಪಟ್ಟಿ – ದೊಡ್ಡ ದೊಡ್ಡವರಿಗೆ ಟಿಕೆಟ್ ಮಿಸ್ ? 

ದೆಹಲಿ : ಲೋಕಸಭೆ ಎಲೆಕ್ಷನ್ ಗೆ ಕರ್ನಾಟಕದಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಸಿದ್ದವಾಗಿದೆ. ನಿನ್ನೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆದಿದೆ. ಈ ಸಭೆಯಲ್ಲಿ ಅಮಿತ್ ಶಾ ರಾಷ್ಟ್ರಾಧ್ಯಕ್ಷ ಜೆಪಿ ನಡ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ, ಬಿಎಲ್ ಸಂತೋಷ್ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು.

ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಪ್ರಕಟಿಸಲಿರುವ ಮೊದಲ ಪಟ್ಟಿಯಲ್ಲಿ 15 ರಿಂದ 17 ಅಭ್ಯರ್ಥಿಗಳ ಘೋಷಣೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಎರಡು ಮೂರು ಸೀಟುಗಳಿಗೆ ಸಂಬಂಧಿಸಿದ ಭಾರಿ ಗೊಂದಲಗಳಿದ್ದು ಅದನ್ನು ತೀರ್ಮಾನಿಸಲು ಮೋದಿ ಅವರಿಗೆ ಬಿಡಲಾಗಿದೆ. ಮೋದಿಯವರು ಮತ್ತು ಅಮಿತ್ ಶಾಂತರಿಕವಾಗಿ ಚರ್ಚೆ ನಡೆಸಿದ ಬಳಿಕ ಅಂತಿಮ ಪಟ್ಟಿ ಇನ್ನೆರಡು ದಿನಗಳ ಒಳಗಡೆ ಘೋಷಣೆಯಾಗಲಿದೆ.

ವಿಧಾನಸಭಾ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ ಕೂಡ ಬಿಜೆಪಿಯಿಂದ ಭಾರೀ ಸರ್ಪ್ರೈಸಿಂಗ್ ಪಟ್ಟಿ ಹೊರಬೀರುವ ಸಾಧ್ಯತೆ ಇದೆ. ಬಿಟಿವಿಗೆ ಸಿಕ್ಕಿರುವ ಎಕ್ಸ್ಕ್ಲೂಸಿವ್ ಮಾಹಿತಿ ಪ್ರಕಾರ ಹಾಲಿ ಕೆಲವು ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬದಲಾಗಿ ಮಾಜಿ ಸಿಎಂಗಳು ಮತ್ತು ಮಾಜಿ ಮಂತ್ರಿಗಳಿಗೆ ಈ ಬಾರಿ ಅದೃಷ್ಟ ಒಳಿದು ಬರಲಿದೆ.

ಮಂಗಳೂರಿನಲ್ಲಿ ಕಾರ್ಯಕರ್ತರ ಅಭಿಪ್ರಾಯ ಮತ್ತು ನಿರೀಕ್ಷೆಯಂತೆ ಮಾಜಿ ಸೇನಾಧಿಕಾರಿ ಕ್ಯಾಪ್ಟನ್ ಬ್ರಿಗೇಡ್ ಚೌಟ ಅವರಿಗೆ ಟಿಕೆಟ್ ಅಂತಿಮಗೊಂಡಿದೆ ಎನ್ನಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹುತೇಕ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಆದರೆ ಅಲ್ಲಿ ವಿರೋಧ ವ್ಯಕ್ತವಾಗಿರುವುದರಿಂದ ಶೋಭ ಕರಂದಾಜಿಗೆ ಬೆಂಗಳೂರು ಉತ್ತರ ಟಿಕೆಟ್ ಸಿಕ್ಕಿದರು ಅಚ್ಚರಿ ಇಲ್ಲ ಈ ತೀರ್ಮಾನವನ್ನು ಮೋದಿ ಅವರೇ ಕೈಗೊಳ್ಳಲಿದ್ದಾರೆ. ನಿನ್ನೆ ತಾನೆ ಫೇಸ್ಬುಕ್ ಲೈವ್ ಬಂದು ಗಲಗಲನೆ ಅತ್ತಿದ್ದ ಪ್ರತಾಪ್ ಸಿಂಹ ಹಾಗೂ ಟಿಕೆಟ್ ಮಿಸ್ ಆಗಿದೆ. ಪ್ರತಾಪ್ ಸಿಂಹ ಬದಲು ಮೈಸೂರು ಮಹಾರಾಜ ಯದವೀರ ಕೃಷ್ಣ ದತ್ತ ಒಡೆಯರಿಗೆ ಟಿಕೆಟ್ ನೀಡಲು ಬಿಜೆಪಿ ತೀರ್ಮಾನಿಸಿದೆ. ಆದರ್ ಯು ಸಿಂಹ ಅವರಿಗೆ ಟಿಕೆಟ್ ನೀಡಲು ರಾಜ್ಯ ಘಟಕ ಮತ್ತು ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರು ಒಲವು ವ್ಯಕ್ತಪಡಿಸಿದ್ದು ಮೋದಿಯವರ ಕೈಯಲ್ಲಿ ಸಿಂಹ ಭವಿಷ್ಯ ನಿರ್ಧಾರವಾಗಲಿದೆ. ಪ್ರತಾಪ್ ಸಿಂಹಾಗೆ ಟಿಕೆಟ್ ನೀಡಲು ಮೋದಿಯವರೇ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಂವಿಧಾನಕ್ಕೆ ಸಂಬಂಧಪಟ್ಟ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಅನಂತ್ ಕುಮಾರ್ ಗೆ ಟಿಕೆಟ್ ಖಚಿತವಾಗಿಯೂ ನಿರಾಕರಣೆ ಯಾಗಲಿದೆ. ಉತ್ತರ ಕನ್ನಡ ಇಂದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾವೇರಿ ಸ್ಪರ್ಧಿಸಲಿದ್ದಾರೆ. 

ಇನ್ನುಳಿದಂತೆ ಬೆಂಗಳೂರು ಕೇಂದ್ರದಿಂದ ಪಿ ಸಿ ಮೋಹನ್ ಸ್ಪರ್ಧೆ ಪಕ್ಕ. ದಕ್ಷಿಣದಿಂದ ಸ್ಪರ್ಧಿಸಲು ಜೈ ಶಂಕರ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯಗೆ ಮತ್ತೊಮ್ಮೆ ಅದೃಷ್ಟ ಖುಲಾಯಿಸಿದೆ. 

ಈ ಹಿಂದೆ ಬಿಟಿವಿ ಪ್ರಕಟಿಸಿದಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ದೇವೇಗೌಡರ ಅಳಿಯ ಜಯದೇವದ ಮಾಜಿ ನಿರ್ದೇಶಕ ಡಾಕ್ಟರ್ ಮಂಜುನಾಥ್ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಲಿದ್ದಾರೆ. 

ಇನ್ನು ದಾವಣಗೆರೆಯಿಂದ ಸಿಟ್ಟಿಂಗ್ mp ಅವರಿಗೆ ಟಿಕೆಟ್ ಮಿಸ್ ಆಗಿದ್ದು ಎಂಪಿ ರೇಣುಕಾಚಾರ್ಯಗೆ ಯಡಿಯೂರಪ್ಪ ಕೃಪಾಕಟಾಕ್ಷ ಲಭ್ಯವಾಗಿದೆ. ವಿಜಯಪುರ ರಿಸರ್ವ್ ಕ್ಷೇತ್ರದಿಂದ ಅನಾರೋಗ್ಯಕ್ಕೆ ಒಳಗಾಗಿರುವ ರಮೇಶ್ ಜಿಗಜನರಿಗೆ ಬದಲು ಗೋವಿಂದ ಕಾರಜೋಳ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. 

ಬಾಗಲಕೋಟೆಯಿಂದ ಮುರುಗೇಶ್ ನಿರಾಣಿ ಸ್ಪರ್ಧೆ ಅಕೈರು ಗೊಲ್ಲಬಹುದು ಜಗದೀಶ್ ಶೆಟ್ಟರ್ ಅಥವಾ ಅವರ ಪುತ್ರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. ತುಮಕೂರಿಂದ ಮಾಜಿ ಸಚಿವ ವಿ ಸೋಮಣ್ಣ ಸ್ಪರ್ಧಿಸಲು ಯಡಿಯೂರಪ್ಪ ಕೂಡ ಹಸಿರು ನಿಶಾನೆ ತೋರಿದ್ದಾರೆ. ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಹೆಸರು ಚರ್ಚೆಗೆ ಬಂದಿದ್ದು ವಿಶ್ವನಾಥ್ ಪುತ್ರ ಅಲೋಕ್ ಮತ್ತು ಸುಧಾಕರ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ ಬಹುತೇಕ ಎರಡನೇ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಅಭ್ಯರ್ಥಿ ಘೋಷಣೆಯಾಗಬಹುದು.

ಮಿತ್ರ ಪಕ್ಷ ಜೆಡಿಎಸ್ ಗೆ ಮಂಡ್ಯ ಹಾಸನ ಮತ್ತು ಕೋಲಾರ ಕ್ಷೇತ್ರವನ್ನು ಬಿಜೆಪಿ ಬಿಟ್ಟು ಕೊಟ್ಟಿದೆ. ಹೀಗಾಗಿ ಕೋಲಾರದಿಂದ ಮುನಿಸ್ವಾಮಿಗೆ ಟಿಕೆಟ್ ಮಿಸ್ ಆಗಿದೆ. ಇಂದು ರಾತ್ರಿ ಅಥವಾ ನಾಳೆ ಬಿಜೆಪಿಯ ಅಧಿಕೃತ ಪಟ್ಟಿ ಘೋಷಣೆಯಾಗಲಿದೆ.

– Btv news desk

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here