Download Our App

Follow us

Home » ಅಪರಾಧ » ಸಂಸದರಿಗೆ ವಂಚನೆ : ಕರ್ನಾಟಕ ಬ್ಯಾಂಕ್ ವಿರುದ್ಧ ಬೆಂಗಳೂರಿನಲ್ಲಿ FIR..!

ಸಂಸದರಿಗೆ ವಂಚನೆ : ಕರ್ನಾಟಕ ಬ್ಯಾಂಕ್ ವಿರುದ್ಧ ಬೆಂಗಳೂರಿನಲ್ಲಿ FIR..!

ಬೆಂಗಳೂರು : ಕರ್ನಾಟಕ ಬ್ಯಾಂಕ್​​ನ ಮಹಾ ದೋಖಾ ಬಯಲಿಗೆ ಬಂದಿದ್ದು, ಕರ್ನಾಟಕ ಬ್ಯಾಂಕ್ ಸಂಸದರಿಗೆ ಮೋಸ ಮಾಡಿರುವ ಪ್ರಕರಣ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ಬ್ಯಾಂಕ್ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲಾಗಿದೆ.

ಕರ್ನಾಟಕ ಬ್ಯಾಂಕ್ ವಿರುದ್ಧ IPC-420, 419, 465, 471, 468, 34 ಅಡಿ ಕೇಸ್ ದಾಖಲಾಗಿದ್ದು, ಸಂಸದರ ಸಹಿಯನ್ನೇ ನಕಲು ಮಾಡಿ ಆಸ್ತಿ ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಕರ್ನಾಟಕ ಬ್ಯಾಂಕ್, ಹಾರ್ದಿಕ್ ಗೌಡ ಸೇರಿ ಮೂವರ ಮೇಲೆ FIR ದಾಖಲಾಗಿದೆ. ಕರ್ನಾಟಕ ಬ್ಯಾಂಕ್ FIRನಲ್ಲಿ 3ನೇ ಆರೋಪಿಯಾಗಿದ್ದು, ನಕಲಿ ದಾಖಲೆ ಸೃಷ್ಟಿಸಿ ಸಂಸದ ರಮೇಶ್ ಜಿಗಜಿಣಗಿಯವರ 8 ಎಕರೆ ಜಾಗವನ್ನ ಗುಳುಂ ಮಾಡಿದ್ದಾರೆ.

ಈ ಬಗ್ಗೆ ವಿಜಯಪುರ ಬಿಜೆಪಿ ಸಂಸದ ಜಿಗಜಿಣಗಿ ಪೊಲೀಸರಿಗೆ ದೂರು ನೀಡಿದ್ದು, TDR ಹಗರಣದಲ್ಲೂ ಕರ್ನಾಟಕ ಬ್ಯಾಂಕ್ ಭಾಗಿಯಾಗಿತ್ತು. ಬ್ಯಾಂಕ್ ವಿರುದ್ಧ FIR ಆಗ್ತಿದ್ದಂತೆ CBI ಎಂಟ್ರಿಯಾಗುವ ಸಾಧ್ಯತೆಯಿದೆ. ರಮೇಶ್ ಜಿಗಜಿಣಗಿಯವರು ತುಳಸಿ ರಾಮೇಗೌಡರಿಂದ 8 ಎಕರೆ ಜಮೀನು ಖರೀದಿಸಿದ್ದು, BBMPಯಿಂದ DRC ಪಡೆಯುವ ಉದ್ದೇಶಕ್ಕೆ ಜಿಗಜಿಣಗಿಯವರು  ಪ್ರಕಾಶ್ ಎಂಬುವರಿಗೆ ಜಿಪಿಎ ನೀಡಿದ್ದರು.

ರಾಜಕೀಯ ಕೆಲಸ ಕಾರ್ಯಗಳ ಬ್ಯುಸಿಯಿಂದಾಗಿ ರಮೇಶ್ ಜಿಗಜಿಣಗಿ ಜಮೀನಿನ ಕಡೆ ಗಮನ ಹರಿಸಿರಲಿಲ್ಲ. ಜಮೀನಿನ ಬಗ್ಗೆ ಬಿಬಿಎಂಪಿ TDR ಪ್ರಕಟಿಸಿದ್ದು, ಪ್ರಕಾಶ್ ಎಂಬವರು ಪವರ್ ಆಫ್ ಅಟಾರ್ನಿ ಪಡೆದಿದ್ದರು. ಪ್ರಕಾಶ್ ಕೊರೋನಾದಿಂದ ಸಾವನ್ನಪ್ಪಿದ್ದು, ಆನಂತರ ದಾಖಲೆ ನೋಡಿದಾಗ ಸಂಸದರು ಶಾಕ್ ಆಗಿದ್ದಾರೆ. ಈ ವೇಳೆ ಜಮೀನು ಹಾರ್ದಿಕ್ ಗೌಡ ಎನ್ನುವವರ ಹೆಸರಿಗೆ GPA ಆಗಿರೋದು ಬೆಳಕಿಗೆ ಬಂದಿದೆ.

ಸಂಸದರೇ ಈತನ ಹೆಸರಿಗೆ GPA ಕೊಟ್ಟಿರುವಂತೆ ನಕಲಿ ದಾಖಲೆ ಸೃಷ್ಟಿಯಾಗಿದ್ದು, ಗಂಗಾನಗರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಂತೆ ದಾಖಲೆ ಸೃಷ್ಟಿಯಾಗಿದೆ.
ಇವುಗಳನ್ನ ಬಳಸಿ ಗಾಂಧಿನಗರ ಸಬ್ ರಿಜಿಸ್ಟರ್ ಕಚೇರಿಯಿಂದ ಹಾರ್ದಿಕ್ ಗೌಡ ತನ್ನ ಹೆಸರಿಗೆ ಪಡೆದಿದ್ದಾನೆ. ಸಹಿ ನಕಲಿ ಮಾಡಿರುವ ಹಾರ್ದಿಕ್ ಗೌಡ, ಆದಿ ಭಾಸ್ಕರ್ ಹಾಗೂ ಇಂದಿರಾನಗರ ಕರ್ನಾಟಕ ಬ್ಯಾಂಕ್ ಶಾಖೆ ವಿರುದ್ಧ ಯಲಹಂಕ ನ್ಯೂಟೌನ್ ಠಾಣೆಗೆ ದೂರು ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರಲ್ಲಿಂದು ಆರ್‌ಸಿಬಿ-ಕೆಕೆಆರ್‌ ನಡುವೆ ಹೈವೋಲ್ಟೇಜ್‌ ಕದನ – ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here