Download Our App

Follow us

Home » ಸಿನಿಮಾ » ಕನ್ನಡದ ಖ್ಯಾತ ನಟಿಗೂ ಕಾಟ, ದೂರು ದಾಖಲಿಸಿದ ಸಂತ್ರಸ್ತೆ..!

ಕನ್ನಡದ ಖ್ಯಾತ ನಟಿಗೂ ಕಾಟ, ದೂರು ದಾಖಲಿಸಿದ ಸಂತ್ರಸ್ತೆ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದೆ. ಈ ಬೆನ್ನಲ್ಲೇ ಇದೀಗ ಸ್ಯಾಂಡಲ್‌ವುಡ್‌ನಲ್ಲಿಯೂ ಕೂಡ ಇಂತಹದ್ದೆ ಪ್ರಕರಣಕ್ಕೆ ಹೋಲುವ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಸಿನಿಮಾ ರಂಗ ಅಂದ್ರೆ ಕೇಳೋದೇ ಬೇಡ. ಇಲ್ಲಿ ಒಳ್ಳೆಯವರು ಇರ್ತಾರೆ, ಕೆಟ್ಟವರು ಇರ್ತಾರೆ. ಕೆಲವರು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ತಮಗಾದ ಕಹಿ ಅನುಭವವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಸಾಕಷ್ಟು ನಟಿಯರು ತಮಗಾದ ಕಾಸ್ಟಿಂಗ್ ಕೌಚ್‌ನಂತಹ ಘಟನೆಗಳ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದಾರೆ.

ಇದೀಗ ಕನ್ನಡ ಖ್ಯಾತ ನಟಿಗೆ ನಿದೇರ್ಶಕನೊಬ್ಬ ಕಿರುಕುಳ ಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ನಟಿಗೆ ಕೆಟ್ಟ ಕೆಟ್ಟದಾಗಿ ಮೆಸೇಜ್‌ ಮಾಡಿ ಕಿರುಕುಳ ಕೊಟ್ಟಿರುವುದಾಗಿ ಸೂರ್ಯ ಎಂಬ ವ್ಯಕ್ತಿ ವಿರುದ್ಧ ಖ್ಯಾತ ನಟಿ ದೂರು ದಾಖಲಿಸಿದ್ದಾರೆ.

ಕಾಸ್ಟಿಂಗ್ ಡೈರೆಕ್ಟರ್ ಎಂದು ಹೇಳಿಕೊಂಡಿರೋ ಸೂರ್ಯ ಎಂಬ ವ್ಯಕ್ತಿಯೂ ನಟಿಗೆ ಅಶ್ಲೀಲ ಮೆಸೇಜ್‌ ಮಾಡಿದ್ದನಂತೆ. ಅಶ್ಲೀಲವಾಗಿ ವಾಟ್ಸಾಪ್​ನಲ್ಲಿ ಸಂದೇಶ ಕಳಿಸಿರೋ ಆರೋಪದಡಿಯಲ್ಲಿ ಆರ್‌ಆರ್‌ ನಗರ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದಾರೆ. ನಟಿಯ ಫೋಟೋಗೆ ತೀರಾ ಕೆಟ್ಟದಾಗಿ ಕಮೆಂಟ್ ಮಾಡಿ ಮೆಸೇಜ್‌ ಮಾಡಿದ್ದ ಅಂತ ನಟಿ ಆರೋಪಿಸಿದ್ದಾರೆ. ಸೂರ್ಯ ತನ್ನನ್ನು ಕಾಸ್ಟಿಂಗ್‌ ಡೈರೆಕ್ಟರ್‌ ಅಂತ ಹೇಳಿಕೊಂಡಿದ್ದರಂತೆ.

ಇನ್ನೂ ಈ ನಟಿ ಸಾಕಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಆರೋಪಿ ಸೂರ್ಯ ವಿರುದ್ದ ದೂರು ಕೊಟ್ಟಿರೋ ವಿಚಾರ ಗೊತ್ತಾಗುತ್ತಿದ್ದಂತೆ ನೆಟ್ಟಿಗರು ಆರೋಪಿ ವಿರುದ್ಧ ಗರಂ ಆಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮೀಟೂ ಪ್ರಕರಣ ಆದ ನಂತರ ಇಂಥ ಕಾಸ್ಟಿಂಗ್‌ ಕೌಚ್‌ ಕೇಸ್‌ಗಳು ಹೆಚ್ಚಾಗಿವೆ. ಕೂಡಲೇ ಆರೋಪಿಯನ್ನು ವಿಚಾರಣೆ ಮಾಡಿ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ : ಸಕ್ಕರೆನಾಡಲ್ಲಿ ನಿಲ್ಲದ ಹೆಣ್ಣು ಭ್ರೂಣ ಹ*ತ್ಯೆ : ಹೆಲ್ತ್‌ ಕ್ವಾಟರ್ಸ್‌ನಲ್ಲೇ ದುಷ್ಕೃತ್ಯ ಬೆಳಕಿಗೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here