Download Our App

Follow us

Home » ಅಪರಾಧ » ಕಲಬುರಗಿ : ಅತ್ತಿಗೆಯಿಂದ ದೂರ ಇರು ಎಂದಿದ್ದಕ್ಕೆ ಮೈದುನನ ಬರ್ಬರ ಹತ್ಯೆ..!

ಕಲಬುರಗಿ : ಅತ್ತಿಗೆಯಿಂದ ದೂರ ಇರು ಎಂದಿದ್ದಕ್ಕೆ ಮೈದುನನ ಬರ್ಬರ ಹತ್ಯೆ..!

ಕಲಬುರಗಿ : ಅತ್ತಿಗೆಯಿಂದ ದೂರ ಇರು ಎಂದು ಹೇಳಿದಕ್ಕೆ ಮೈದುನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ನಡೆದಿದೆ. ಹೀರಾಲಾಲ್ ಲದಾಫ್ (35) ಕೊಲೆಯಾದ ದುರ್ದೈವಿ.

ಕೊಲೆಯಾದ ಹೀರಾಲಾಲ್ ಅತ್ತಿಗೆ ಜೊತೆ ರವಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರವನ್ನು ಹೀರಾಲಾಲ್ ತನ್ನ ಅಣ್ಣ ಬಾಬು ಲದಾಫ್​ಗೆ ತಿಳಿಸಿದ್ದನು. ಇತ್ತ ಅನೈತಿಕ ಸಂಬಂಧ ತಿಳಿದ ಕೂಡಲೇ ರವಿಯಿಂದ ದೂರ ಇರುವಂತೆ ಬಾಬು ತನ್ನ ಪತ್ನಿಗೆ ಹೇಳಿದ್ದರು. ಆದರೆ ಆಕೆ ತನ್ನ ಪ್ರಿಯಕರನ ಜೊತೆ ಸೇರಿ ಪತಿ ಬಾಬು ಲದಾಫ್ ಮೇಲೆಯೇ ಹಲ್ಲೆ ಮಾಡಿದ್ದಾಳೆ.

ಪತ್ನಿಯ ಅನೈತಿಕ ಸಂಬಂಧದಿಂದ ಮಾನಸಿಕವಾಗಿ ನೊಂದು ಬಾಬು ಲದಾಫ್ ಊರನ್ನೇ ಬಿಟ್ಟಿದ್ದರು. ಅಣ್ಣನ ಸಂಸಾರ ಸರಿದಾರಿಗೆ ತರಲು ಯತ್ನಿಸಿ ಅನೈತಿಕ ಸಂಬಂಧ ಬಿಟ್ಟು ಬಿಡುವಂತೆ ರವಿಗೆ ಹಿರಾಲಾಲ್ ಹೇಳಿದ್ದರು. ಇದೇ ವಿಚಾರವಾಗಿ ಹೀರಾಲಾಲ್ ರವಿ ಮಧ್ಯೆ ಆಗಾಗ ಗಲಾಟೆ ಕೂಡ ಆಗಿತ್ತು.

ಮೊನ್ನೆ ಕುಡಿದ ನಶೆಯಲ್ಲಿ ಗಲಾಟೆ ಮಾಡಿಕೊಂಡ ಬಳಿಕ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ರು. ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಹೀರಾಲಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಚನ್ನಗಿರಿ ಪೊಲೀಸ್​ ಠಾಣೆ ಧ್ವಂಸ ಕೇಸ್ – ಅಧಿಕಾರಿಗಳ ಅಮಾನತು ಖಂಡಿಸಿ ಇಂದು ಪ್ರೊಟೆಸ್ಟ್..!​

 

 

 

 

Leave a Comment

DG Ad

RELATED LATEST NEWS

Top Headlines

ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಶ್ರೀಗಳು..!

ಮೈಸೂರು : ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ನಿನ್ನೆ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ

Live Cricket

Add Your Heading Text Here