Download Our App

Follow us

Home » ಅಪರಾಧ » ದರ್ಶನ್‌ ಗ್ಯಾಂಗ್‌ಗೆ ಸೆ.12ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ..!

ದರ್ಶನ್‌ ಗ್ಯಾಂಗ್‌ಗೆ ಸೆ.12ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ಗೆ ಸೆಪ್ಟೆಂಬರ್ 12 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ 24ನೇ ಎಸಿಎಂಎಂ ಕೋರ್ಟ್‌ ಆದೇಶ ಹೊರಡಿಸಿದೆ.

ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನಟ ದರ್ಶನ್‌ನನ್ನು ಇಂದು ಬಳ್ಳಾರಿ ಜೈಲಿನಿಂದ, ಪವಿತ್ರಾಗೌಡ ಮತ್ತಿತರನ್ನು ಪರಪ್ಪನ ಅಗ್ರಹಾರದಿಂದ ಹಾಗೂ ರಾಜ್ಯದ ವಿವಿಧ ಜೈಲಿನಿಂದ ಒಟ್ಟು 17 ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಇದೀಗ ಸೆ.12ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿರುವುದರಿಂದ ದರ್ಶನ್ ಗ್ಯಾಂಗ್‌ಗೆ ಸೆರೆವಾಸ ಮುಂದುವರಿದಿದೆ.

ಕೋರ್ಟ್‌ಗೆ ಡಿಜಿಟಲ್‌ ಎವಿಡೆನ್ಸ್‌ ಸಲ್ಲಿಕೆ : ನ್ಯಾಯಾಲಯಕ್ಕೆ ಹಾಜರಾದ ಎಸ್‌ಪಿಪಿ ಪ್ರಸನ್ನ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಎವಿಡೆನ್ಸ್ ಹಾರ್ಡ್ ಡಿಸ್ಕ್ , ಪೆನ್​ಡ್ರೈವ್‌, ಸಿಡಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಬಳಿಕ ಜಡ್ಜ್ ಚಾರ್ಜ್​ಶೀಟ್​ ಪ್ರತಿ ನೀಡಲು ವಕೀಲರಿಗೆ ಸೂಚಿಸಿದ್ದಾರೆ. ತನಿಖಾಧಿಕಾರಿ ಎಸಿಪಿ‌ ಚಂದನ್ ಪೆನ್ ಡ್ರೈವ್, ಸಿಡಿ, ಡಿವಿಡಿ, ಹಾರ್ಡ್ ಡಿಸ್ಕ್ ಕಂ ಪೆನ್ ಡ್ರೈವ್ ಸೇರಿ ಒಟ್ಟು 60 ಡಿಜಿಟಲ್ ಎವಿಡೆನ್ಸ್‌ಗಳನ್ನು ಕೋರ್ಟ್‌ಗೆ ಸಲ್ಲಿಸಿದರು.

ಇದನ್ನೂ ಓದಿ : ವಿಜಯಪುರ : ಕುಡಿದ ನಶೆಯಲ್ಲಿ ಸ್ನೇಹಿತನ್ನೇ ಹತ್ಯೆಗೈದ ಪಾಪಿ..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here