Download Our App

Follow us

Home » ಅಪರಾಧ » ಹುಬ್ಬಳ್ಳಿ ಅಂಜಲಿ ಹಂತಕನಿಗೆ ಜಡ್ಜ್​ ಕ್ಲಾಸ್ ​- ಜಡ್ಜ್​ ಮುಂದೆ ಹಾಜರಾಗುವಾಗ ಕಣ್ಣೀರು ಹಾಕಿದ್ದ ವಿಶ್ವ..!

ಹುಬ್ಬಳ್ಳಿ ಅಂಜಲಿ ಹಂತಕನಿಗೆ ಜಡ್ಜ್​ ಕ್ಲಾಸ್ ​- ಜಡ್ಜ್​ ಮುಂದೆ ಹಾಜರಾಗುವಾಗ ಕಣ್ಣೀರು ಹಾಕಿದ್ದ ವಿಶ್ವ..!

ಹುಬ್ಬಳ್ಳಿ : ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಆರೋಪಿ ವಿಶ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಇಂದು ಸಿಐಡಿ ಅಧಿಕಾರಿಗಳು ಕೋರ್ಟ್​ ಮುಂದೆ ಪಡಿಸಿದ್ದಾರೆ.

ಸಿಐಡಿ ಅಧಿಕಾರಿಗಳು ವಿಶ್ವ ಅಲಿಯಾಸ್​ ಗಿರೀಶ್​ನನ್ನು ಕೋರ್ಟ್​ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ 15 ದಿನ ಕಸ್ಟಡಿಗೆ ಕೊಡುವಂತೆ ಕೇಳಿದ್ದಾರೆ. ಜಡ್ಜ್​ ಮುಂದೆ ಹಾಜರಾಗುವಾಗ ಆರೋಪಿ ವಿಶ್ವ ಕಣ್ಣೀರು ಹಾಕಿದ್ದಾನೆ. ಜಡ್ಜ್​​ ಮುಂದೆ ಕರೆತರುತ್ತಿದ್ದಂತೆ ಕೈ ಮುಗಿದು ಕಣ್ಣೀರು ಹಾಕಿರುವ ವಿಶ್ವನ್ನು ತರಾಟೆಗೆ ತೆಗೆದುಕೊಂಡ ಹುಬ್ಬಳ್ಳಿ ಕೋರ್ಟ್ ನ್ಯಾಯಾಧೀಶರು ಹೀನ ಕೃತ್ಯ ಮಾಡುವ ಮೊದ್ಲು ಈ ಕಣ್ಣೀರು ನೆನಪಿಗೆ ಬರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಆರೋಪಿಯನ್ನು 8 ದಿನ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.

 

ಇನ್ನು ವಿಶ್ವ ಅಲಿಯಾಸ್​ ಗಿರೀಶ್​ನನ್ನು ವಿಚಾರಣೆ ಮಾಡಲಿರುವ ಸಿಐಡಿ ಅಧಿಕಾರಿಗಳು, ಅಂಜಲಿ ಮತ್ತು ವಿಶ್ವನಿಗೆ ಎಷ್ಟು ದಿನಗಳ ಪರಿಚಯ ಇತ್ತು. ಇಬ್ಬರ ನಡುವೆ ಪರಸ್ಪರ ಪ್ರೀತಿ ಆರಂಭ ಆಗಿದ್ದು ಹೇಗೆ. ಇವರಿಬ್ಬರು ಎಲ್ಲೆಲ್ಲಿ ಸುತ್ತಾಡಿದ್ದರು. ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಿದ್ದೇಕೆ. ಅಂಜಲಿ-ವಿಶ್ವ ಮೈಸೂರಿನ ಲಾಡ್ಜ್​​ನಲ್ಲಿ ಉಳಿದುಕೊಂಡಿದ್ದ ಮಾಹಿತಿ. ಈ ಎಲ್ಲಾ ಅಂಶಗಳನ್ನು ವಿಚಾರಣೆ ವೇಳೆ ಸಿಐಡಿ ಟೀಂ ಕಲೆ ಹಾಕಲಿದೆ.

ಇದನ್ನೂ ಓದಿ : ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​ಗಳಿಗೆ ಬಾಂಬ್​ ಬೆದರಿಕೆ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here