ಚಿತ್ರದುರ್ಗ : ವಕ್ಫ್ ಬೆಂಕಿ ಹಚ್ಚುತ್ತಿರೋದು ಸಚಿವ ಜಮೀರ್ ಅಹ್ಮದ್ ಖಾನ್, ಮೊದಲು ಅವ್ರನ್ನು ಗಡಿಪಾರು ಮಾಡ್ಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ವಕ್ಫ್ ಬೆಂಕಿ ಹಚ್ಚುತ್ತಿರೋದು ಸಚಿವ ಜಮೀರ್ ಅಹ್ಮದ್ ಖಾನ್, ಅವ್ರನ್ನು ಗಡಿಪಾರು ಮಾಡ್ಬೇಕು. ಸರ್ಕಾರದಿಂದಲೇ ರೈತರ ಒಕ್ಕಲೆಬ್ಬಿಸೋ ಪ್ರಯತ್ನ ಆಗ್ತಿದೆ ಎಂದು ಸಿಎಂ ಸಿದ್ದು ಹಾಗೂ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂತು. ಈಗ ಹಿಂದ(ಹಿಂದುಳಿದ, ಪರಿಶಿಷ್ಟ) ಸಮಾಜಕ್ಕೆ ಅನ್ಯಾಯ ಮಾಡ್ತಿದ್ದಾರೆ. ದೇಗುಲ, ಮಠ ಮಾನ್ಯಗಳ ಜಮೀನುಗಳನ್ನೂ ಕಸಿಯುತ್ತಿದ್ದಾರೆ. ನೋಟಿಸ್ ವಾಪಸ್ ಅಂತಾ ಕಣ್ಣೊರೆಸೋದು ಬೇಡ. ತಾಕತ್ತಿದ್ದರೆ ಗೆಜೆಟ್ ನೋಟಿಫಿಕೇಷನ್ ಕ್ಯಾನ್ಸಲ್ ಮಾಡಿ. ಜಮೀರ್ ಗೂಂಡಾ ವರ್ತನೆ ಮಾಡ್ತಿದ್ದಾರೆ. ಗೊಂದಲ ಸೃಷ್ಟಿ ಮಾಡಿದ್ದೇ ಜಮೀರ್ ಅಹ್ಮದ್ ಖಾನ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ನಿರ್ದೇಶಕರ ಸಂಘದಲ್ಲಿ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ..!