Download Our App

Follow us

Home » ಸಿನಿಮಾ » ನಿರ್ದೇಶಕರ ಸಂಘದಲ್ಲಿ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ..!

ನಿರ್ದೇಶಕರ ಸಂಘದಲ್ಲಿ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ..!

ದಿವಂಗತ ಪುಟ್ಟಣ್ಣ ಕಣಗಾಲ್ ಮತ್ತು ಅವರ ಸಮಕಾಲೀನರು 1984ರಲ್ಲಿ ಕಟ್ಟಿರುವ ಸಂಸ್ಥೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡ) ಇದನ್ನು ಉಳಿಸಿ ಬೆಳೆಸಲು ಅದೆಷ್ಟೋ ನಿರ್ದೇಶಕರ ಪರಿಶ್ರಮವಿದೆ.

ಎನ್ನಾರ್ ಕೆ ವಿಸ್ವನಾಥ್ ಅವರು ಅಧ್ಯಕ್ಷರಾದ ಮೇಲೆ ಅವರ ತಂಡ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ದಿನಾಚರಣೆ ಮತ್ತು ಇತರ ಕಾರ್ಯಕ್ರಮಗಳನ್ನು ಆಚರಿಸುತ್ತಾ ಬರುತ್ತಿದೆ. ಇಷ್ಟೇ ಅಲ್ಲದೆ ನಿರ್ದೇಶಕರ ಯೋಗಕ್ಷೇಮಕ್ಕಾಗಿ ಸಂಘದ ಅಭಿವೃದ್ಧಿಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ.

ಇದೇ ಸಂದರ್ಭದಲ್ಲಿ‌ ನವೆಂಬರ್ ಒಂದರಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಕಛೇರಿಯ ಮುಂಭಾಗದಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚಾರಿಸಲಾಗಿದೆ.

ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್, ಉಪಾಧ್ಯಕ್ಷರಾದ ಜೋ ಸೈಮನ್ ಮತ್ತು ಜಗದೀಶ್ ಕೊಪ್ಪ, ಕಾರ್ಯದರ್ಶಿಗಳಾದ ಸೆಬಾಸ್ಟಿನ್ ಡೇವಿಡ್, ಜಂಟಿ ಕಾರ್ಯದರ್ಶಿಗಳಾದ ಮಳವಳ್ಳಿ ಸಾಯಿಕೃಷ್ಣ, ಖಜಾಂಚಿಗಳಾದ ಆದಿತ್ಯ ಚಿಕ್ಕಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಟಾಪ್ ಸ್ಟಾರ್ ರೇಣು ಕುಮಾರ್, ಮರಡಿಹಳ್ಳಿ ನಾಗಚಂದ್ರ, ಬಿ ಶಂಕರ್, ಎ ಎನ್ ಜಯರಾಮಯ್ಯ, ಎಸ್ ಆರ್ ಪ್ರಮೋದ್, ನಿರ್ದೇಶಕರುಗಳಾದ ಹುಲಿವಾನ ಗಂಗಾಧರ್, ಓಂಕಾರಸ್ವಾಮಿ ಪುರುಷೋತ್ತಮ್, ಮೋಹನ್ ಎಸ್ ಮಾಳಗಿ, ಸುಧಾಕರ್ ಬನ್ನಂಜೆ, ಚಂದ್ರಶೇಖರ್ ಮುಂತಾದ ಗಣ್ಯರು ಭಾಗವಹಿಸಿ ಕನ್ನಡ ನಾಡಿನ ಸೊಬಗನ್ನು ವಿವರಿಸಿ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶುಭ ಹಾರೈಸಿದರು.

ಇದನ್ನೂ ಓದಿ : ಭೈರತಿ ರಣಗಲ್‌ ಚಿತ್ರದ ‘ಅಜ್ಞಾತವಾಸ’ ಹಾಡಿಗೆ ಫ್ಯಾನ್ಸ್​ ಫಿದಾ.. ನ.15ಕ್ಕೆ ಸಿನಿಮಾ ತೆರೆಗೆ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here