ಗದಗ : ಜೈಲ್ ವಾರ್ಡನ್ ಕೊಲೆ ಕೇಸ್ಗೆ ಸಾಥ್ ಕೊಟ್ಟಿರೋ ರಹಸ್ಯ ಕಳ್ಳತನ ಕೇಸ್ ತನಿಖೆ ವೇಳೆ ಬಯಲಾಗಿದೆ. ಶ್ರೀಕಾಂತ್ ಗುಡಗೂರ ಎಂಬಾತ ಚಿತ್ರದುರ್ಗ ಜೈಲಿನ ವಾರ್ಡನ್ ಆಗಿದ್ದ. ಈತ ಚಿತ್ರದುರ್ಗ ಜೈಲಿನಲ್ಲಿ A-1 ಪ್ರಸಾದ್ಗೆ ಬೇಲ್ ಕೊಡಿಸಲು 1.90 ಲಕ್ಷ ಪಡೆದಿದ್ದ. ಆರೋಪಿಗಳು ಕಳ್ಳತನ ಮಾಡಿಯೇ ಶ್ರೀಕಾಂತ್ಗೆ ಹಣ ಕೊಟ್ಟಿದ್ದರು. ಸರ್ಕಾರಿ ನೌಕರನಾಗಿ ಯಾಕೆ ಕಳ್ಳತನಕ್ಕೆ ಸಪೋರ್ಟ್ ಎಂದು ಪ್ರಶ್ನೆ ಕೇಳಿದಾಗ ಶ್ರೀಕಾಂತ ಪೊಲೀಸರ ಮುಂದೆ ಕೊಲೆ ಕೇಸ್ ಬಗ್ಗೆ ಬಾಯ್ಬಿಟ್ಟಿದ್ದಾನೆ.
2023ರ ಮೇ 10ರಂದು ಪ್ರಸಾದ್, ಶ್ರೀಕಾಂತ್ ರಾಮು ಎಂಬಾತನನ್ನ ಕೊಲೆ ಮಾಡಿದ್ದ. ರಾಣೆಬೆನ್ನೂರು ಹೊರ ವಲಯದ ಖಾಲಿ ಜಾಗದಲ್ಲಿ ಕೊಲೆ ನಡೆದಿತ್ತು. ಸಹೋದರರಾಗಿದ್ದ ರಾಮು, ಪ್ರಸಾದ್ ಕಳ್ಳತನ ವೃತ್ತಿ ಮಾಡ್ತಿದ್ದರು. ಶ್ರೀಕಾಂತ ಐಡಿಯಾದಂತೆ ದೇವಸ್ಥಾನಗಳ ಟಾರ್ಗೆಟ್ ಮಾಡಿ ಕದ್ದಿದ್ದರು, ಗೂಗಲ್ ಮ್ಯಾಪ್ನಲ್ಲಿ ಶ್ರೀಕಾಂತ್ ದೇಗುಲಗಳ ಮಾಹಿತಿ ನೀಡ್ತಿದ್ದ. ಶ್ರೀಕಾಂತ್ ಕಳ್ಳತನ ಪ್ಲಾನಿಂಗ್ ಉಸ್ತುವಾರಿ ವಹಿಸಿಕೊಂಡಿದ್ದ.
ಶ್ರೀಕಾಂತ್ ಮುಂದಾಳತ್ವ ವಹಿಸಿದ್ದಕ್ಕೆ ರಾಮು ಅಸಹನೆ ತೋರಿ ಪ್ರಸಾದ್ ಜೊತೆ ಜಗಳ ಮಾಡಿಕೊಂಡಿದ್ದ. ಪಾರ್ಟಿ ಮಾಡುತ್ತ ಕುಳಿತಾಗ ರಾಮು ತಲೆಯ ಮೇಲೆ ಪ್ರಸಾದ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಕೊಲೆಯಲ್ಲಿ ಪ್ರಸಾದ್ ಜೊತೆ ಶ್ರೀಕಾಂತ್ ಕೂಡ ಭಾಗಿಯಾಗಿದ್ದ.
ಇದನ್ನೂ ಓದಿ : ಸ್ಯಾಂಡಲ್ವುಡ್ನಲ್ಲಿ Mee Too ಪ್ರಕರಣ – ಸೆ.16ಕ್ಕೆ ಫಿಲ್ಮ್ ಚೇಂಬರ್ನಲ್ಲಿ ಮಹತ್ವದ ಸಭೆ..!