ಬೆಂಗಳೂರು : ಮಾಲಿವುಡ್ ಬೆನ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ಮತ್ತೆ Mee Too ಪ್ರಕರಣ ಸದ್ದು ಮಾಡುತ್ತಿದ್ದು, ಈ ಹಿನ್ನೆಲೆ ಸೆಪ್ಟೆಂಬರ್ 16ಕ್ಕೆ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆಯಲಿದೆ.
ಕಲಾವಿದರ ಸಂಘ, ಫಿಲ್ಮ್ ಚೇಂಬರ್ ಹಾಗೂ 100 ಕಲಾವಿದರನ್ನು ಸಭೆಗೆ ಆಹ್ವಾನಿಸಲು ಎರಡು ದಿನಗಳ ಹಿಂದೆ ಮಹಿಳಾ ಆಯೋಗ ಫಿಲ್ಮ್ ಚೇಂಬರ್ಗೆ ಪತ್ರ ಬರೆದಿದೆ. ಹಾಗಾಗಿ ಸೆಪ್ಟೆಂಬರ್ 16ಕ್ಕೆ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆಸಲು ನಿರ್ಧರಿಸಿ ಕಲಾವಿದರನ್ನು ವಿಚಾರಣೆಗೆ ಕರೆದಿದ್ದಾರೆ. 100 ನಟಿ ಮಣಿಯರಿಂದ ಫಿಲ್ಮ್ ಚೇಂಬರ್ನಲ್ಲೇ ಮಾಹಿತಿ ಸಂಗ್ರಹಿಸಲಿದ್ದಾರೆ.
ಈ ಹಿಂದೆ ಫೈರ್ ಸಂಸ್ಥೆ ಕೇರಳ ಮಾದರಿಯಲ್ಲಿ ಆಯೋಗ ರಚನೆಗೆ ಮನವಿ ಮಾಡಿತ್ತು, ನಟಿಯರ ಭದ್ರತೆ ಹಾಗೂ ಸಮಸ್ಯೆಗಳಿಗೆ ಪೂರಕವಾಗಿ ಸಮಿತಿ ರಚನೆಗೆ ಒತ್ತಾಯಗಳು ಕೇಳಿಬರುತ್ತಿತ್ತು. ‘ಮಾಲಿವುಡ್’ ಮಾದರಿಯಲ್ಲೇ ಆಯೋಗ ರಚಿಸಲು ಹಲವರು ಆಗ್ರಹಿಸಿದ್ದರು, ಕೇರಳದ ನ್ಯಾ.ಹೇಮಾ ಕಮಿಟಿ ರಿಪೋರ್ಟ್ ಸಿಸಿನಿಮಾ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಇದೀಗ ಮಹಿಳಾ ಆಯೋಗ ಕಲಾವಿದೆಯರ ಮೇಲಿನ ದೌರ್ಜನ್ಯ ಗಂಭೀರವಾಗಿ ಪರಿಗಣಿಸಿದೆ. ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ನೇತೃತ್ವದಲ್ಲಿ ಸೆಪ್ಟೆಂಬರ್ 16ರಂದು ಸಭೆ ನಡೆಯಲಿದೆ.
ಇದನ್ನೂ ಓದಿ : ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ನಟನ ಎದೆ ಭಾಗಕ್ಕೆ ಭಾರಿ ಪೆಟ್ಟು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ..!