Download Our App

Follow us

Home » ಸಿನಿಮಾ » ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ‘ಜಾಕಿ’ ಚಿತ್ರ..!

ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ‘ಜಾಕಿ’ ಚಿತ್ರ..!

“ಜಾಕಿ” ಮರು ಬಿಡುಗಡೆಯು ಎಲ್ಲೆಡೆ ಸಂಚಲನ ಮೂಡಿಸಿ, ಹೊಸ ಚಿತ್ರದಂತೆ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಸೋಲ್ಡ್ ಔಟ್ ಶೋಗಳು, ಮರು ಬಿಡುಗಡೆಗೊಂಡ ಮೊದಲನೇ ದಿನವೇ ಒಟ್ಟು 1 ಕೋಟಿ ರೂಪಾಯಿ ಸಂಪಾದಿಸಿದೆ. ಎರಡನೇ ದಿನದ ಶೋಗಳು ಇದೇ ರೀತಿಯ ಪ್ರತಿಕ್ರಿಯೆಯನ್ನು ಕಂಡಿದೆ. ಇಂದು ಪುನೀತ್ ರಾಜ್​​ಕುಮಾರ್ ಅವರ ಹುಟ್ಟುಹಬ್ಬವಾದ್ದರಿಂದ “ಜಾಕಿ” ಸಿನಿಮಾ ಇನ್ನು ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

14 ವರ್ಷಗಳ ನಂತರ “ಜಾಕಿ” ಮಾರ್ಚ್ 15ರಂದು ತೆರೆಗೆ ಮರುಕಳಿಸಿ 175 ಚಿತ್ರಮಂದಿರಗಳಲ್ಲಿ ಭರ್ಜರಿ ಮರು ಬಿಡುಗಡೆಯನ್ನು ಕಂಡಿತು. ಇನ್ನಾವ‌ ಮರು ಬಿಡುಗಡೆಯಾದ ಚಿತ್ರವೂ ಪಡೆಯದಂತಹ ಮತ್ತು ಊಹಿಸಲು ಸಾಧ್ಯವಾಗದಂತಹ ಪ್ರತಿಕ್ರಿಯೆಯನ್ನು ಕಂಡಿದೆ. ಈ ಚಿತ್ರವನ್ನು ವಿತರಿಸಿದ ಕೆ.ಆರ್.ಜಿ ಸ್ಟುಡಿಯೋಸ್, ಪಿ.ಆರ್‌.ಕೆ ಮತ್ತು ಅಪ್ಪು ಅಭಿಮಾನಿಗಳ ಸತತ ಪರಿಶ್ರಮಕ್ಕೆ ತಕ್ಕ ಫಲವೇ ದೊರೆತಿದೆ ಎಂದರೆ ತಪ್ಪಾಗಲಾರದು.

ಈ‌‌ ಕುರಿತು ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, “ಜಾಕಿ ಒಂದು ಮಾಸ್ ಚಿತ್ರ. ಈ ಚಿತ್ರದ ಮರು ಬಿಡುಗಡೆಯ ಮೂಲಕ ನಾವು ಮತ್ತು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಸಂಭ್ರಮಿಸಲು ಇಚ್ಛಿಸುತ್ತೇವೆ. ಇದೇ ರೀತಿ ಪ್ರತಿ ವರ್ಷವೂ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಚಿತ್ರವನ್ನು ಮರು ಬಿಡುಗಡೆ ಮಾಡುತ್ತೇವೆ. ಮುಂದಿನ ವರ್ಷ, ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೆ. ಆರ್.ಜಿ ಸ್ಟುಡಿಯೋಸ್ ಮತ್ತು ಪಿ.ಆರ್‌.ಕೆ ಪುನೀತ್ ಅವರ ಚೊಚ್ಚಲ ಚಿತ್ರವಾದ ‘ಅಪ್ಪು’ವನ್ನು ಮರು ಬಿಡುಗಡೆ ‌ಮಾಡಬೇಕೆಂದು ನಿರ್ಧರಿಸಿದ್ದೇವೆ. ಚಿತ್ರದ ಕಲರ್ ಗ್ರೇಡಿಂಗ್ ಮತ್ತು ಇನ್ನಿತರ ಕೆಲಸಗಳು ಏಪ್ರಿಲ್ ತಿಂಗಳಲ್ಲಿ ಆರಂಭಗೊಳಲ್ಲಿವೆ” ಎಂದರು.

ಇದನ್ನೂ ಓದಿ : ಲೋಕಸಭೆ ಚುನಾವಣೆ 2024 : ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 13 ಲಕ್ಷ ರೂ. ವಶಕ್ಕೆ..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here