ಇರಾನ್ : ಕಳೆದ ಅಕ್ಟೋಬರ್ 1 ರಂದು ನಡೆದಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿ ಮಾಡುತ್ತಿದೆ. ಇದೀಗ ಇಸ್ರೇಲ್ ದಾಳಿಗೆ ಇರಾನ್ನ ಇಬ್ಬರು ಸೈನಿಕರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
200 ಮಿಸೈಲ್ಗಳನ್ನು ಪ್ರಯೋಗ ಮಾಡಿದ್ದ IDF, 100 ಜೆಟ್ ವಿಮಾನಗಳ ಮೂಲಕ ಮಿಸೈಲ್ ಅಟ್ಯಾಕ್ ಮಾಡಿದೆ. IDF ಸೇನೆ ತೆಹ್ರಾನ್, ಕರಾಝ್ನಲ್ಲಿ ಸ್ಫೋಟಗೊಂಡಿದೆ. 2ನೇ ಅತಿ ದೊಡ್ಡ ತೈಲ ಘಟಕದ ಸಮೀಪವೂ ದಾಳಿ ನಡೆದಿದೆ.
ಇನ್ನು ಖೋಮೈನಿ ಏರ್ಪೋರ್ಟ್ ಮೇಲೂ ಮಿಸೈಲ್ ಅಟ್ಯಾಕ್ ನಡೆಸಿದೆ. ಬೆಂಕಿಯುಂಡೆಗಳು ಆಗಸದ ಎತ್ತರಕ್ಕೆ ಚಿಮ್ಮಿದ್ದು, ಸಾಲು-ಸಾಲು ಕಟ್ಟಡಗಳು ಸಂಪೂರ್ಣ ನೆಲಸಮವಾಗಿದೆ. ದಾಳಿಯ ಪರಿಣಾಮ ಇರಾನ್ಇಸ್ರೇಲ್ ವಾಯು ಪ್ರದೇಶದಲ್ಲಿ ವಿಮಾನ ಸಂಚಾರ ರದ್ದಾಗಿದ್ದು, ಇರಾನ್ ಕಡೆಯಿಂದಲೂ ಇಸ್ರೇಲ್ಗೆ ಪ್ರತಿಕಾರ ದಾಳಿ ನಡೆದಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ರೌಡಿಶೀಟರ್ಗಳ ಮನೆ ಮೇಲೆ ಪೊಲೀಸರ ದಾಳಿ..!
Post Views: 37