ಬೆಂಗಳೂರು : ಡಿಜಿಪಿಯಾಗಿ IPS ಅಧಿಕಾರಿ ಮಾಲಿನಿ ಕೃಷ್ಣಮೂರ್ತಿ ಭಡ್ತಿ ಪಡೆದಿದ್ದಾರೆ. ಮಾಲಿನಿ ಕೃಷ್ಣಮೂರ್ತಿ ಡಿಜಿಪಿಯಾಗಿ ಭಡ್ತಿ ಪಡೆದು ತಂದೆಗೆ ಸೆಲ್ಯೂಟ್ ಹೊಡೆಡಿದ್ದಾರೆ. ಮಾಲಿನಿ ಕೃಷ್ಣಮೂರ್ತಿಯವರ ತಂದೆ ಕೃಷ್ಣಮೂರ್ತಿ ಕೂಡ ನಿವೃತ್ತ IPS ಅಧಿಕಾರಿಯಾಗಿದ್ದು, ಡಿಜಿಪಿ ಪ್ರತಾಪ್ ರೆಡ್ಡಿ ನಿವೃತ್ತಿಯಾದ ಹಿನ್ನಲೆ ಇದೀಗ ಮಾಲಿನಿ ಕೃಷ್ಣಮೂರ್ತಿಯವರಿಗೆ ಡಿಜಿಪಿಯಾಗಿ ಪ್ರಮೋಷನ್ ಸಿಕ್ಕಿದೆ.
1993 ಬ್ಯಾಚ್ IPS ಅಧಿಕಾರಿಯಾಗಿ ಪೊಲೀಸ್ ಇಲಾಖೆ ಸೇರಿದ್ದ ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು. ಕಾರಗೃಹ ಇಲಾಖೆ DGP ಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ರಾಜ್ಯದ ದಕ್ಷ ಹಾಗೂ ಪ್ರಾಮಾಣಿಕ ಮಹಿಳಾ ಅಧಿಕಾರಿಯಾಗಿದ್ದಾರೆ.
Post Views: 487