Download Our App

Follow us

Home » ಜಿಲ್ಲೆ » ಪುನೀತ್​ ಕೆರೆಹಳ್ಳಿ ಮೇಲೆ ದೌರ್ಜನ್ಯ ಮಾಡಿದ ACP ವಿರುದ್ಧ ತನಿಖೆ ಆಗ್ಬೇಕು – DCP ಮುಂದೆ 3 ಬೇಡಿಕೆ ಇಟ್ಟ ಪ್ರತಾಪ್​​ ಸಿಂಹ..!

ಪುನೀತ್​ ಕೆರೆಹಳ್ಳಿ ಮೇಲೆ ದೌರ್ಜನ್ಯ ಮಾಡಿದ ACP ವಿರುದ್ಧ ತನಿಖೆ ಆಗ್ಬೇಕು – DCP ಮುಂದೆ 3 ಬೇಡಿಕೆ ಇಟ್ಟ ಪ್ರತಾಪ್​​ ಸಿಂಹ..!

ಬೆಂಗಳೂರು : ರಾಜಸ್ಥಾನದಿಂದ ನಾಯಿ ಮಾಂಸ ತುಂಬಿರುವ ಬಾಕ್ಸ್​​​ಗಳು ಬಂದಿವೆ ಎಂದು ಹೇಳಿ ಹಿಂದೂ ಪರ ಸಂಘಟನೆಗಳ ನಾಯಕ ಪುನೀತ್ ಕೆರೆಹಳ್ಳಿ ಹಾಗೂ ತಂಡ ಪ್ರತಿಭಟನೆ ಮಾಡಿದ್ದರು. ಈ ಸಂಬಂಧ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಲಾಕಪ್​​ನಲ್ಲಿ ಬಟ್ಟೆ ಬಿಚ್ಚಿ ಮನಸ್ಸು ಇಚ್ಛೆ ಹಲ್ಲೆ ಮಾಡಿದ್ದರು ಎಂದು ACP ಚಂದನ್​ ವಿರುದ್ಧ ಪುನೀತ್​​ ಕೆರೆಹಳ್ಳಿ ಗಂಭೀರ ಆರೋಪ ಮಾಡಿದ್ದರು.

ಪುನೀತ್ ಕೆರೆಹಳ್ಳಿ ಬಂಧನ ವಿರೋಧಿಸಿ ಇಂದು ಎಸಿಪಿ ಕಚೇರಿಗೆ ಹಿಂದೂ ಕಾರ್ಯಕರ್ತರ ಸಮೇತ ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದ್ದರು. ವಿಜಯನಗರ ACP ಕಚೇರಿಯಲ್ಲಿ DCP ಶೇಖರ್​ ಟೆಕ್ಕಣ್ಣವರ್​ ಭೇಟಿ ಮಾಡಿ, ಎಸಿಪಿ ಚಂದನ್​​ ಕುಮಾರ್​ ದೌರ್ಜನ್ಯದ ಬಗ್ಗೆ ದೂರು ನೀಡಿದ್ದಾರೆ. ಈ ವೇಳೆ ಶಾಸಕ ಹರೀಶ್​ ಪೂಂಜಾ, ಹಿಂದೂ ಕಾರ್ಯಕರ್ತ ಪುನೀತ್​ ಕೆರೆಹಳ್ಳಿ ಸಾಥ್ ನೀಡಿದ್ದರು.

ಸೆಂಟ್ರಲ್​​ DCP ಮುಂದೆ ಮೂರು ಬೇಡಿಕೆ ಇಟ್ಟ ಮಾಜಿ ಸಂಸದ ಪ್ರತಾಪ್​​ ಸಿಂಹ ಅವರು, ಕಳಪೆ ಮಾಂಸ ಪೂರೈಸ್ತಿರೋ ಅಬ್ದುಲ್​​ ರಜಾಕ್​ ಮೇಲೆ FIR ಆಗ್ಬೇಕು. ಪುನೀತ್​ ಕೆರೆಹಳ್ಳಿ ಮೇಲೆ ದೌರ್ಜನ್ಯ ಮಾಡಿದ ವಿಜಯನಗರ ಉಪವಿಭಾಗ ACP ಚಂದನ್​ ವಿರುದ್ಧ ತನಿಖೆ ಆಗ್ಬೇಕು.ಪೊಲೀಸರು ವಶಕ್ಕೆ ಪಡೆದ ಮಾಂಸದ ಸತ್ಯಾಸತ್ಯತೆ ಬಯಲು ಮಾಡ್ಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ‘ನೈಸ್ ರೋಡ್’ ಸಿನಮಾಗೆ ಕಂಟಕ – ನಿರ್ಮಾಪಕರಿಗೆ ನೋಟಿಸ್​​, ಅಷ್ಟಕ್ಕೂ ಆಗಿದ್ದೇನು?

Leave a Comment

DG Ad

RELATED LATEST NEWS

Top Headlines

ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ.

Live Cricket

Add Your Heading Text Here