Download Our App

Follow us

Home » ಜಿಲ್ಲೆ » ಭಾರತದ ಹೃದಯ ರಾಮಮಂದಿರ, ಭಾರತದ ಆತ್ಮ ರಾಮ. ನಾವು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಹೋಗುತ್ತಿದ್ದೇವೆ- ರಾಘವೇಶ್ವರ ಶ್ರೀ..!

ಭಾರತದ ಹೃದಯ ರಾಮಮಂದಿರ, ಭಾರತದ ಆತ್ಮ ರಾಮ. ನಾವು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಹೋಗುತ್ತಿದ್ದೇವೆ- ರಾಘವೇಶ್ವರ ಶ್ರೀ..!

ಕಾರವಾರ : ರಾಮಮಂದಿರದ ಬಗ್ಗೆ ಶಂಕರಾಚಾರ್ಯ ಪೀಠದ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಪ್ರತಿಕ್ರಿಯಿಸಿ, ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾವು ತೆರಳುವುದಾಗಿ ಹೇಳಿದರು.

ಗುರುವಾರ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಖಾಸಗಿ ವಾಹಿನಿಯೊಂದಿಗೆ ರಾಘವೇಶ್ವರ ಶ್ರೀ ಮಾತನಾಡಿ, ಅಯೋಧ್ಯೆ ಭಾರತದ ಹೃದಯ ಸ್ಥಾನದಲ್ಲಿದೆ, ರಾಮಮಂದಿರ ಭಾರತದ ಹೃದಯ, ರಾಮ ಭಾರತದ ಆತ್ಮ. ಮನುಷ್ಯನ ಹೃದಯ ಸರಿ ಇಲ್ಲದಿದ್ದರೆ ಅಘಾತವಾಗಿದ್ರೆ ಏನಾಗುತ್ತೋ ಅದೇ ಸ್ಥಿತಿ ಈ ದೇಶಕ್ಕಾಗಿತ್ತು.

ನಾನು ರಾಮಮಂದಿರದ ಉದ್ಘಾಟನೆಗೆ ತೆರಳುತ್ತಿದ್ದೇನೆ, ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆಗೆ ರಸ್ತೆಯ ಮೂಲಕ ಪ್ರಯಾಣ ಮಾಡಿ ಕಾರ್ಯದಲ್ಲಿ ಭಾಗವಹಿಸಿ ಹಿಂದಿರುಗುತ್ತೇನೆ ಎಂದರು.

ಕಳೆದ 500 ವರ್ಷಗಳ ಕಾಲ ಭಾರತಕ್ಕೆ ಹೃದಯಘಾತವಾಗಿತ್ತು. ಹೃದಯ ಹೀನತೆ, ಹೃದಯ ಶೂನ್ಯತೆಯಾಗಿತ್ತು. ಆ ಹೃದಯವನ್ನು ಮತ್ತೆ ಪ್ರತಿಷ್ಠಾಪನೆ ಮಾಡುವ ಕಾರ್ಯವಾಗುತ್ತಿದೆ. ರಾಮಮಂದಿರದ ಪುನರ್ ಪ್ರತಿಷ್ಠಾಪನೆಯ ಮಹತ್ವ ಶರೀರದಲ್ಲಿ ಹೃದಯವನ್ನು ಮತ್ತೆ ಅಳವಡಿಸುವಷ್ಟು ಮಹತ್ವದ್ದಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ್​ ಖರ್ಗೆ ಆಯ್ಕೆ..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಖಾಸಗಿ ಬಸ್ಸನ್ನೇ ಕದ್ದು ಎಸ್ಕೇಪ್ ಆಗಿರೋ ಖತರ್ನಾಕ್ ಕಳ್ಳರು..!

ಚಿತ್ರದುರ್ಗ : ಖಾಸಗಿ ಬಸ್​​ವೊಂದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಯಕನಹಟ್ಟಿ ಮೂಲದ SRE ಬಸ್ ಮಾಲೀಕ ಸಯ್ಯದ್

Live Cricket

Add Your Heading Text Here