Download Our App

Follow us

Home » ರಾಷ್ಟ್ರೀಯ » ಕೇಂದ್ರದ ಭಾರತ್ ಬ್ರ್ಯಾಂಡ್​ನ ಅಕ್ಕಿ ಮಾರಾಟಕ್ಕೆ ಇಂದು ಚಾಲನೆ – ಕೆಜಿಗೆ 29 ರೂ, ಆನ್​ಲೈನ್​ನಲ್ಲೂ ಖರೀದಿಸಬಹುದು..!

ಕೇಂದ್ರದ ಭಾರತ್ ಬ್ರ್ಯಾಂಡ್​ನ ಅಕ್ಕಿ ಮಾರಾಟಕ್ಕೆ ಇಂದು ಚಾಲನೆ – ಕೆಜಿಗೆ 29 ರೂ, ಆನ್​ಲೈನ್​ನಲ್ಲೂ ಖರೀದಿಸಬಹುದು..!

ಕೇಂದ್ರದ ಮಹತ್ವದ ಭಾರತ್​ ಅಕ್ಕಿ ಯೋಜನೆಗೆ ಇಂದು ಚಾಲನೆ ಸಿಗಲಿದ್ದು, ಇಂದಿನಿಂದ ಕೇವಲ 29 ರೂ.ಗೆ ಜನರಿಗೆ ಅಕ್ಕಿ ಸಿಗಲಿದೆ. ಇಂದು ಸಂಜೆ 4 ಗಂಟೆಗೆ ಭಾರತ್​ ಅಕ್ಕಿ ರಿಲೀಸ್​ ಆಗಲಿದ್ದು, 5 ಕೆ.ಜಿ 10 ಕೆ.ಜಿ ಬ್ಯಾಗ್​ಗಳಲ್ಲಿ ಲಭ್ಯವಿರಲಿದೆ. ಇನ್ನು ಮೊದಲ ಹಂತದಲ್ಲಿ 5 ಲಕ್ಷ ಟನ್​ ಅಕ್ಕಿ ಬಿಡುಗಡೆ ಮಾಡಲು ಕೇಂದ್ರ ನಿರ್ಧರಿಸಿದೆ.

ನ್ಯಾಷನಲ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ (ನಾಫೆಡ್), ನ್ಯಾಷನಲ್​ ಕಂಜೂಮರ್ ಫೆಡರೇಷನ್ ಆಫ್ ಇಂಡಿಯಾ(NCCF), ಕೇಂದ್ರೀಯ ಭಂಡಾರ, ಇ-ಕಾಮರ್ಸ್ ತಾಣಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತೆ. ಈಗಾಗಲೇ ಭಾರತ್ ಆಟಾ ಪ್ರತಿ ಕೆಜಿಗೆ 27.50 ರೂ.ಗೆ ಹಾಗೂ ಭಾರತ್ ದಾಲ್ ಅನ್ನು ಕೆಜಿಗೆ 60 ರೂ.ನಂತೆ ಮಾರಾಟ ಮಾಡಲಾಗ್ತಿದೆ.

ಆನ್​ಲೈನ್​ನಲ್ಲೂ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿಗೆ ಅವಕಾಶ – ಇನ್ನು ರಿಲಯನ್ಸ್​​, ಫ್ಲಿಪ್​​ಕಾರ್ಟ್​, ಬಿಗ್​ ಬಾಸ್ಕೆಟ್​ ಅಷ್ಟೇ ಅಲ್ಲದೆ ಆನ್​ಲೈನ್​ನಲ್ಲೂ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿ ಮಾಡಬಹುದು. ಇನ್ನೊಂದು ವಾರದಲ್ಲಿ ಇತರೆ ಸ್ಟೋರ್​ಗಳಲ್ಲೂ ಭಾರತ್ ಅಕ್ಕಿ ಲಭ್ಯವಾಗಲಿದೆ. ಎನ್‌ಸಿಸಿಎಫ್‌ನ ಮುಖ್ಯ ಗೋಡಾನ್ ಯಶವಂತಪುರದಲ್ಲಿದ್ದು ಬೆಂಗಳೂರಿನ 50 ಏರಿಯಾಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ಅಕ್ಕಿ ತಲುಪಿಸಲು ಸಿದ್ಧತೆ ನಡೆದಿದೆ.

ಇದನ್ನೂ ಓದಿ : ಮದುವೆಯಾಗೋದಾಗಿ ನಂಬಿಸಿ ಸ್ಟಾರ್ ಆಟಗಾರ್ತಿ ಮೇಲೆ ಅತ್ಯಾಚಾರ ಆರೋಪ : ಇಂಡಿಯನ್ ಹಾಕಿ ಟೀಂ ಪ್ಲೇಯರ್ ವಿರುದ್ಧ FIR..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here