Download Our App

Follow us

Home » ಜಿಲ್ಲೆ » ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ರೆಸಾರ್ಟ್​ – ತನಿಖೆ ಮಾಡಿ ವರದಿ ಸಲ್ಲಿಸಲು ಟ್ರಿಬ್ಯುನಲ್​ ಆದೇಶ..!

ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ರೆಸಾರ್ಟ್​ – ತನಿಖೆ ಮಾಡಿ ವರದಿ ಸಲ್ಲಿಸಲು ಟ್ರಿಬ್ಯುನಲ್​ ಆದೇಶ..!

ಬೆಂಗಳೂರು : ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ರೆಸಾರ್ಟ್ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಲು ಟ್ರಿಬ್ಯುನಲ್​ ಆದೇಶ ನೀಡಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಿಂದ ಕೊಪ್ಪಳ ಡಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ, ರೆಸಾರ್ಟ್​​ಗೆ ನೋಟಿಸ್​ ನೀಡಿದ್ದಾರೆ.

ತುಂಗಭದ್ರಾ ನದಿ ಬಫರ್​​ ಝೋನ್​​​​​ನಲ್ಲಿ ಅಕ್ರಮ ರೆಸಾರ್ಟ್​, ಹಂಪಿ ಬೌಲ್ಡರ್ ರೆಸಾರ್ಟ್ ಅಕ್ರಮವಾಗಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಈ ರೆಸಾರ್ಟ್​ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಳ್ಳಿ ಕೊಪ್ಪಳ ಡಿಸಿಗೆ ರೆಸಾರ್ಟ್​ ತೆರವು ಮಾಡುವಂತೆ ದೂರು ನೀಡಿದ್ದರು. ದೂರಿಗೆ ಸ್ಪಂದಿಸದೇ ಹೋದಾಗ ಕಲ್ಲಳ್ಳಿ ಟ್ರಿಬ್ಯುನಲ್​​ ಮೊರೆ ಹೋಗಿದ್ದು, ದಿನೇಶ್​ ಕಲ್ಲಳ್ಳಿ ದೂರು ಆಧರಿಸಿ ಟ್ರಿಬ್ಯುನಲ್​​ ನೋಟಿಸ್​ ಕೊಟ್ಟಿದ್ದಾರೆ.

ನದಿ ದಡದಿಂದ 900 ಅಡಿ ಒಳಗೆ ಕೃಷಿ ಚಟುವಟಿಕೆ ಸೇರಿ ಎಲ್ಲವೂ ನಿಷಿದ್ಧವಾಗಿದೆ. ನದಿ ಜಾಗವನ್ನು ಅತಿಕ್ರಮಣ ಮಾಡಿ ಬಫರ್ ಝೋನ್ ಭೂಮಿಯಲ್ಲಿ ಯಾರಿಗೂ ಕಟ್ಟಡ ಕಟ್ಟಲು ಅವಕಾಶ ಇಲ್ಲದಿದ್ದರೂ ರೆಸಾರ್ಟ್​ ನಿರ್ಮಿಸಿದ್ದರು. ತುಂಗಭದ್ರಾ ನದಿ ಮತ್ತು ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್​ ನಿರ್ಮಿಸಿದ್ದು, ನೀರುನಾಯಿ ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸಿದ್ರೂ ರೆಸಾರ್ಟ್​ ನಿರ್ಮಾಣ ಮಾಡಿದ್ದಾರೆ.

2015ರಲ್ಲಿ ನೀರುನಾಯಿ ಸಂರಕ್ಷಣಾ ಮೀಸಲು ಪ್ರದೇಶ ಘೋಷಣೆಯಾಗಿತ್ತು. 34 ಕಿ.ಮೀ ಸಮೀಪದ ಹೊಳೆ ಮುದ್ಲಾಪುರದಿಂದ ಆರಂಭವಾಗುವ ನದಿ ಪಾತ್ರವಾಗಿದ್ದು, ತುಂಗಭದ್ರಾ ಅಣೆಕಟ್ಟು ಹಿನ್ನೀರಿನಲ್ಲಿ ಬರುವ ನೀರುನಾಯಿ ಆವಾಸಸ್ಥಾನವಾಗಿದೆ. ಆದರೆ ನೀರು ನಾಯಿ ಸಂರಕ್ಷಾಣಾ ಪ್ರದೇಶವೆಂದು ಘೋಷಿಸಿದ್ರೂ ಅಕ್ರಮ ರೆಸಾರ್ಟ್​ ಸ್ಥಾಪನೆ ಮಾಡಲಾಗಿದೆ. ಮರಳು ಗಣಿಗಾರಿಕೆ, ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ವಿಸರ್ಜನೆಯೂ ನಿಷಿದ್ಧ ಹೇರಿದೆ. ಇಷ್ಟಾದ್ರೂ ಅಕ್ರಮವಾಗಿ ರೆಸಾರ್ಟ್​ ನಡೆಸಲಾಗುತ್ತಿದೆ ಎಂದು ಕಲ್ಲಹಳ್ಳಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಗ್ರೀನ್​​ ಟ್ರಿಬ್ಯುನಲ್​​​ ಸೂಚನೆ ನೀಡಿದೆ.

ಇದನ್ನೂ ಓದಿ : ಹೆಚ್​ಡಿಕೆ-ಬಿಎಸ್​ವೈ ಒಂದಾಗಿ ಏನೇ ಮಾಡಿದ್ರೂ ಸಿದ್ದು ಇಳಿಯಲ್ಲ – ಎಂ.ಬಿ ಪಾಟೀಲ್..!​​

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here