ವಿಜಯಪುರ : ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಚು ನಡೆಯಲ್ಲ, ವಚನಭ್ರಷ್ಟರು ಸೇರಿ ಮಾಡ್ತಿರೋ ಮಸಲತ್ತು ಫಲಿಸಲ್ಲ. ಹೆಚ್ಡಿಕೆ-ಬಿಎಸ್ವೈ ಒಂದಾಗಿ ಏನೇ ಮಾಡಿದ್ರೂ ಸಿದ್ದು ಇಳಿಯಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ವಿಜಯನಗರದಲ್ಲಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, 20-20 ಸರ್ಕಾರದಲ್ಲಿ ಹೆಚ್ಡಿಕೆ ಅಧಿಕಾರ ಬಿಡದೇ ವಚನ ಭ್ರಷ್ಟರಾದ್ರು. ಬಿಎಸ್ವೈ ಆಪರೇಷನ್ ಕಮಲ ಮಾಡಿ ಹೆಚ್ಡಿಕೆ ಸರ್ಕಾರ ಕೆಡವಿದ್ರು, 2007ರ ಸೇಡನ್ನು 2019ರಲ್ಲಿ ಬಿಎಸ್ವೈ ತೀರಿಸಿಕೊಂಡರು ಎಂದರು.
ಈಗ ಇಬ್ಬರೂ ಒಂದಾಗಿ ಸಿದ್ದು ಸರ್ಕಾರ ಕೆಡವಲು ಹೊರಟಿದ್ದಾರೆ, ಮುಡಾ ಕೇಸ್ನಲ್ಲಿ ಏನೇನೂ ಅಕ್ರಮ ನಡೆದಿಲ್ಲ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಕೊಡೋ ಸಾಹಸ ಮಾಡಲ್ಲ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ : ಪ್ರಾಸಿಕ್ಯೂಷನ್ ವಿವಾದದ ಹೊತ್ತಲ್ಲೇ ಸಿದ್ದು ಸರ್ಕಾರಕ್ಕೆ ರಾಜ್ಯಪಾಲರ ಮೆಚ್ಚುಗೆ..!
Post Views: 36