ಮೈಸೂರು : ಚುನಾವಣೆಗೆ ಡಿಪಾಸಿಟ್ ಇಡಲೂ ನನ್ನ ಬಳಿ ಹಣ ಇರ್ಲಿಲ್ಲ. ಚುನಾವಣೆಗೆ ಜನರೇ ದುಡ್ಡು ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದರು ಎಂದು ಮುಡಾ ಸಮರಕ್ಕೆ ದಾಖಲೆ ಸಮೇತ ಸಿಎಂ ಸಿದ್ದರಾಮಯ್ಯ ದೋಸ್ತಿಗಳಿಗೆ ಭರ್ಜರಿ ಗುದ್ದು ಕೊಟ್ಟಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಸಿದ್ದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಎಲ್ಲೂ ನನ್ನ ಮೇಲೆ ಭ್ರಷ್ಟಾಚಾರ ಆರೋಪ ಇಲ್ಲ. ಮಂತ್ರಿ, ಡಿಸಿಎಂ, ಸಿಎಂ ಆಗಿ ಕಾನೂನು ಮೀರಿ ನಡೆದಿಲ್ಲ ಎಂದಿದ್ದಾರೆ.
ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ನಾನು ಈ ರಾಜ್ಯದ ಜನರಿಗೆ ಯಾವತ್ತೂ ದ್ರೋಹ ಮಾಡಿಲ್ಲ. ರಾಜಕೀಯದಲ್ಲಿ ಇರೋವರೆಗೂ ದ್ರೋಹ ಮಾಡಲ್ಲ. ಆಸ್ತಿ ಮಾಡುವ, ಕಟ್ಟಡ ಕಟ್ಟುವ ವ್ಯಾಮೋಹ ಇಲ್ಲ. ಒಂದು ರೂಪಾಯಿ ಇಲ್ಲದೆ ರಾಜಕಾರಣಕ್ಕೆ ಬಂದಿದ್ದೆ ಎಂದಿದ್ದಾರೆ.
ಪಾದಯಾತ್ರೆ ಮಾಡ್ತಿರೋ ದೋಸ್ತಿಗಳಿಗೆ ಟಕ್ಕರ್ ಕೊಟ್ಟ ಅವರು, ಎಷ್ಟೇ ಪಾದಯಾತ್ರೆ ಮಾಡಿದ್ರೂ ಜಗ್ಗಲ್ಲ, ಕುಗ್ಗಲ್ಲ. ಜನರ ಆಶೀರ್ವಾದ ಇರೋವರೆಗೂ ನನ್ನನ್ನ ಮುಟ್ಟೋಕ್ಕಾಗಲ್ಲ. BJP-JDS ನಮ್ಮ ಸರ್ಕಾರ ಅಲುಗಾಡಿಸಲು ಆಗಲ್ಲ. ದುರುದ್ದೇಶದಿಂದ BJP-JDS ಪಾದಯಾತ್ರೆ ಮಾಡ್ತಿವೆ ಎಂದಿದ್ದಾರೆ.
ಇನ್ನು ಮೋದಿ ಪ್ರಧಾನಿಯಾದ್ರೆ ದೇಶದಲ್ಲಿ ಇರಲ್ಲ ಅಂದವರು ಯಾರು. ಕೋಮುವಾದಿ, ಮನುವಾದಿಗಳನ್ನ ತೊಲಗಿಸಬೇಕಿದೆ. ಜಾತಿವಾದಿ, ಪಾಳೆಗಾರರನ್ನ ಓಡಿಸಬೇಕಿದೆ. ಶೋಷಿತರು ಅಧಿಕಾರ ಮಾಡುವುದನ್ನ ಇವರು ಸಹಿಸಲ್ಲ. ಅರಸು, ಬಂಗಾರಪ್ಪ, ಮೊಯ್ಲಿಗೂ ಆಡಳಿತ ನಡೆಸಲು ಬಿಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ, ಕಾಂಗ್ರೆಸ್ ಸರ್ಕಾರವನ್ನು ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ – ಡಿಕೆಶಿ ಗುಡುಗು..!