Download Our App

Follow us

Home » ಸಿನಿಮಾ » ವಿಭಿನ್ನ ಕಥೆ ಮೂಲಕ ನಿರೀಕ್ಷೆ ಮೂಡಿಸಿರುವ “ಹೈನಾ” ಸಿನಿಮಾ – ಜ.15ರಂದು ಸಂಸದ ತೇಜಸ್ವಿ ಸೂರ್ಯ ಅವರಿಂದ ಟ್ರೇಲರ್​ ರಿಲೀಸ್​!

ವಿಭಿನ್ನ ಕಥೆ ಮೂಲಕ ನಿರೀಕ್ಷೆ ಮೂಡಿಸಿರುವ “ಹೈನಾ” ಸಿನಿಮಾ – ಜ.15ರಂದು ಸಂಸದ ತೇಜಸ್ವಿ ಸೂರ್ಯ ಅವರಿಂದ ಟ್ರೇಲರ್​ ರಿಲೀಸ್​!

ಸ್ಯಾಂಡಲ್​​ವುಡ್​ನಲ್ಲಿ ವಿಭಿನ್ನ ಕಥಾ ಹಂದರ ಹೊಂದಿರುವ “ಹೈನಾ” ಚಿತ್ರದ ಟ್ರೇಲರ್​ ಜನವರಿ 15 ರಂದು ಯುವ ಸಂಸದ ತೇಜಸ್ವಿ ಸೂರ್ಯ ಅವರಿಂದ ಅನಾವರಣವಾಗಲಿದೆ. ಅಮೃತ ಫಿಲಂ ಸೆಂಟರ್ ಲಾಂಛನದಲ್ಲಿ ವೆಂಕಟ್ ಭಾರದ್ವಾಜ್ ಹಾಗೂ ರಾಜ್ ಕಮಲ್ ನಿರ್ಮಿಸಿರುವ ಹಾಗೂ ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ “ಹೈನಾ” ಚಿತ್ರದ ಟ್ರೇಲರ್ ಜನವರಿ 15ರಂದು ಬಿಡುಗಡೆಯಾಗಲಿದೆ‌.

ತಮ್ಮ ಅಮೋಘ ಕಾರ್ಯವೈಖರಿ ಹಾಗೂ ಅದ್ಭುತ ವಾಕ್ಚಾತುರ್ಯದಿಂದ ದೇಶದ ಜನರ ಗಮನ ಸೆಳೆದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಅವರು “ಹೈನಾ” ಚಿತ್ರದ ಟ್ರೇಲರ್ ಅನಾವರಣ ಮಾಡಲಿದ್ದಾರೆ.

ಈ ಬಗ್ಗೆ “ಹೈನಾ” ಚಿತ್ರದ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಮಾಹಿತಿ ನೀಡಿದರು. ನಮ್ಮ‌ “ಹೈನಾ” ಚಿತ್ರದ ಬಗ್ಗೆ ತಿಳಿದುಕೊಂಡ ಸಂಸದ ತೇಜಸ್ವಿ ಸೂರ್ಯ ಅವರು ಜನವರಿ 15ರಂದು ಟ್ರೇಲರ್ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ. “ಹೈನಾ” ಸಿನಿಮಾ ದೇಶಭಕ್ತಿ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. ಗುಪ್ತಾಚಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಇಲಾಖೆಯ ಕಾರ್ಯವೈಖರಿಯ‌ ಬಗ್ಗೆ ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ. ದೇಶಭಕ್ತಿಯ ಕುರಿತಾದ ಚಿತ್ರಕ್ಕೆ ಸದಾ ನನ್ನ ಬೆಂಬಲ ಇರುತ್ತದೆ. ಹಾಗಾಗಿ‌ ನಾನು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಸರಳ, ಸಜ್ಜನಿಕೆಗೆ ಹೆಸರಾಗಿರುವ ಸಹೃದಯಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ನಮ್ಮ ತಂಡದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ನಿರ್ದೇಶಕ ವೆಂಕಟ್ ಭಾರದ್ವಾಜ್ ಹೇಳಿದ್ರು.

ಇತ್ತೀಚೆಗಷ್ಟೇ ಹೈನಾ ಚಿತ್ರದ ಲಿರಿಕಲ್ ವಿಡಿಯೋ ಲಕ್ಷಾಂತರ ಜನರ ಮನ ಗೆದ್ದಿದೆ. ಟ್ರೇಲರ್ ಹಾಗೂ ಚಿತ್ರದ ಬಗ್ಗೆ ಸಾಕಷ್ಟು ಸಿನಿ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯಿದೆ.

ಹರ್ಷ ಅರ್ಜುನ್, ದಿಗಂತ ಸ್ವರೂಪ, ರಾಜ್ ಕಮಲ್, ಲಕ್ಷ್ಮಣ ಶಿವಶಂಕರ್, ನಂದಕಿಶೋರ್ ಮತ್ತು ಲಾರೆನ್ಸ್ ಪ್ರೀತಂ ಅವರಂತಹ ಪ್ರತಿಭಾನ್ವಿತ ನಟರ ತಾರಾಬಳಗವಿರುವ ‘ಹೈನಾ’ ಚಿತ್ರಕ್ಕೆ ಲಕ್ಷ್ಮಣ್ ಶಿವಶಂಕರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಲವ್ ಪ್ರಾಣ್ ಮೆಹ್ತಾ ಸಂಗೀತ ನಿರ್ದೇಶನ, ನಿಶಾಂತ್ ನಾನಿ ಛಾಯಾಗ್ರಹಣ ಹಾಗೂ ಶಮಿಕ್ ವಿ ಭಾರದ್ವಾಜ್ ಸಂಕಲನವಿರುವ “ಹೈನಾ” ಚಿತ್ರ ಜನವರಿ ತಿಂಗಳ ಕೊನೆಗೆ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ.

ಇದನ್ನೂ ಓದಿ : ಹೊಸ ವರ್ಷದ ಬಿಗ್​ ಆಫರ್​.. ಯಾರಿಗುಂಟು ಯಾರಿಗಿಲ್ಲ – ‘ಸೋನು’ ಜೊತೆ 24*7 ಇರಬಹುದಾದ ಸುವರ್ಣಾವಕಾಶ.. ಈಗಲೇ ಅರ್ಜಿ ಹಾಕಿ!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ : ಆಸ್ತಿಗಾಗಿ ತಂದೆ, ಮಲತಾಯಿಯನ್ನ ಕೊಚ್ಚಿ ಕೊಲೆಗೈದ ಮಗ..!

ಹುಬ್ಬಳ್ಳಿ : ಆಸ್ತಿಗಾಗಿ ಪುತ್ರನೊಬ್ಬ ತಂದೆ ಮತ್ತು ಮಲತಾಯಿಯನ್ನ ಕೊಚ್ಚಿ ಕೊಲೆಗೈದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ತಂದೆ ಅಶೋಕ, ಮಲತಾಯಿ ಶಾರದಮ್ಮರನ್ನ ಪುತ್ರ

Live Cricket

Add Your Heading Text Here