ಬೆಂಗಳೂರು : ಬೃಹತ್ ಮರ ಬಿದ್ದು ಎರಡು ಕಾರುಗಳು ಜಖಂ ಆಗಿರುವ ಘಟನೆ ನಗರದ ಇಂಡಿಯನ್ ಎಕ್ಸ್ಪ್ರೆಸ್ ಬಳಿಯ ಕ್ವೀನ್ಸ್ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಭಾರೀ ದುರಂತ ತಪ್ಪಿದ್ದು, ಕೆಲವೇ ಸೆಕೆಂಡ್ಗಳಲ್ಲಿ ಕಾರು ಮಾಲೀಕರು ಬಚಾವ್ ಆಗಿದ್ದಾರೆ.
ಮಳೆ, ಗಾಳಿ ಯಾವುದು ಇಲ್ಲದೆ ಮಾಮೂಲಿ ಗಾಳಿಗೆ ಬೃಹತ್ ಮರ ನೆಲಕ್ಕೆ ಉರುಳಿದೆ. ಈ ವೇಳೆ ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಎರಡು ಕಾರುಗಳು ಜಖಂ ಆಗಿದೆ. ಮರ ಬಿದ್ದಾಗ ಕಾರಿನಲ್ಲಿ ಜನ ಇಲ್ಲದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ : ಸ್ವಪಕ್ಷದ ನಾಯಕರ ವಿರುದ್ಧವೇ ಕಿಡಿಕಾರಿದ ಮಾಜಿ ಸಚಿವ ಅರವಿಂದ ಲಿಂಬಾವಳಿ..!
Post Views: 84