Download Our App

Follow us

Home » ಮೆಟ್ರೋ » ಬೆಂಗಳೂರು : ಪೆಟ್ರೋಲ್​​ ಸುರಿದುಕೊಂಡು ಗೃಹಿಣಿ ಆತ್ಮಹ*ತ್ಯೆ..!

ಬೆಂಗಳೂರು : ಪೆಟ್ರೋಲ್​​ ಸುರಿದುಕೊಂಡು ಗೃಹಿಣಿ ಆತ್ಮಹ*ತ್ಯೆ..!

ಬೆಂಗಳೂರು : ಪೆಟ್ರೋಲ್​​ ಸುರಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವಿನ ಅಕ್ಷಯನಗರದಲ್ಲಿ ನಡೆದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.

ಕಳೆದ 5 ವರ್ಷದ ಹಿಂದೆ ಅನುಷಾಗೆ ಶ್ರೀಹರಿ ಎಂಬಾತನ ಜೊತೆ ವಿವಾಹವಾಗಿತ್ತು, ದಂಪತಿಗೆ ಎರಡು ವರ್ಷದ ಮಗು ಇದೆ. ಗಂಡನಿಗೆ ಅನೈತಿಕ ಸಂಬಂಧ ಅನುಮಾನ ಹಿನ್ನೆಲೆ ಹೆಂಡತಿ ಜಗಳ ಮಾಡುತ್ತಿದ್ದಳು.

2 ದಿನಗಳ ಹಿಂದೆ ಮಹಿಳೆ ಬಾತ್ ರೂಂನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು. ನಂತರ ಅನುಷಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ : ಆನ್​​ಲೈನಲ್ಲಿ ಲಕ್ಷ-ಲಕ್ಷ ಹಣ ಕಳ್ಕೊಂಡು ಸಾಲ ತೀರಿಸಲು ಈ ಭೂಪ ಮಾಡಿದ್ದೇನು ಗೊತ್ತಾ?

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here