Download Our App

Follow us

Home » ರಾಜಕೀಯ » ಮಾಜಿ ಸಚಿವನಿಗೆ ಬ್ಲ್ಯಾಕ್‌ಮೇಲ್ – ಹನಿಟ್ರ್ಯಾಪ್​​​​​​​​ ಲೇಡಿ ಫೋನ್​ನಲ್ಲಿ 8 ಜನರ ವಿಡಿಯೋಗಳು ಪತ್ತೆ..!

ಮಾಜಿ ಸಚಿವನಿಗೆ ಬ್ಲ್ಯಾಕ್‌ಮೇಲ್ – ಹನಿಟ್ರ್ಯಾಪ್​​​​​​​​ ಲೇಡಿ ಫೋನ್​ನಲ್ಲಿ 8 ಜನರ ವಿಡಿಯೋಗಳು ಪತ್ತೆ..!

ಕಲಬುರಗಿ : ಅಶ್ಲೀಲ ಮೇಸೆಜ್​​ಗಳನ್ನ‌ಇಟ್ಟುಕೊಂಡು ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್ ಮಗನಿಗೆ ಹಣಕ್ಕೆ ಬ್ಲ್ಯಾಕ್​ ಮೇಲ್ ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಡಿಯೋ-ವಿಡಿಯೋ ಬಿಡುಗಡೆ ಮಾಡದಿರಲು 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಕಲಬುರಗಿಯಲ್ಲಿ ಹನಿಟ್ರ್ಯಾಪ್​​ನದ್ದೇ ಗದ್ದಲ ಶುರುವಾಗಿದೆ.

ಮಂಜುಳಾ ಪಾಟೀಲ್​​ ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲಾಗಿದೆ. ಹನಿಟ್ರ್ಯಾಪ್​ ಮಾಡಲು ಹೋಗಿ ಸಿಸಿಬಿ ಬಲೆಗೆ ಬಿದ್ದಿರುವ ಮಂಜುಳಾ ಪಾಟೀಲ್ ಬ್ಯಾಗ್ ನಲ್ಲಿ 6 ಸ್ಮಾರ್ಟ್ ಪೋನ್ ಪತ್ತೆ‌ಯಾಗಿವೆ. ಈ ಆರು ಫೋನ್​ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಪರಿಶೀಲನೆ ಮಾಡಿದಾಗ ಬರೋಬ್ಬರಿ ಎಂಟು ಜನರ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಮೊಬೈಲ್ ನಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ, ಪೊಲೀಸ್ ಅಧಿಕಾರಿ , ಪಿಡಬ್ಲೂಡಿ ಅಧಿಕಾರಿ ಸೇರಿ ಎಂಟು ಜನರ ವಿಡಿಯೋಗಳು ಪತ್ತೆಯಾಗಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ಒಂದೊಂದಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಬಿಟಿವಿಗೆ ಕಲಬುರಗಿಯ ಹನಿಟ್ರ್ಯಾಪ್​​​ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಮಾಜಿ ಸಚಿವರ ಪುತ್ರನಿಗೆ ಡಿಮ್ಯಾಂಡ್​ ಇಟ್ಟಿದ್ದ ಸ್ಫೋಟಕ ಆಡಿಯೋ ಲಭ್ಯವಾಗಿದೆ. ಪುತ್ರನಿಗೆ ಕರೆ ಮಾಡಿ 20 ಲಕ್ಷ ಕೇಳಿ, ನಾನು ಬಾರ್ಗೇನ್​​ ಮಾಡ್ತಾ ಕೂರಲ್ಲ ಬೇಗ ಕೊಟ್ಟು ಬಿಡಿ. 20 ಲ್ಯಾಕ್ಸ್​ ಕೊಟ್ಟರೆ ನಾನು ಸುಮ್ಮನೆ ಇರ್ತೀನಿ, ತಂಗಿಗೆ ಕೊಟ್ಟೇ, ಮಗಳಿಗೆ ಕೊಟ್ಟೇ ಎಂದುಕೊಳ್ಳಿ. ಇದರಲ್ಲಿ ನನ್ನ ತಪ್ಪು ಏನಿದೆ ಹೇಳಿ ಎಂದು ಮಂಜುಳಾ ಪಾಟೀಲ್​​ ಹೇಳಿದ್ದಾರೆ.

ಇದನ್ನೂ ಓದಿ : ಮುಂಬೈನ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – 9 ಮಂದಿಗೆ ಗಾಯ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ – ಹೂವು, ಹಣ್ಣು, ಪಟಾಕಿ ಖರೀದಿಗೆ ಮುಗಿಬಿದ್ದ ಜನರು..!

ಬೆಂಗಳೂರು : ದೀಪಾವಳಿಯನ್ನು ದೀಪಗಳ ಹಬ್ಬ ಎಂದೂ ಕರೆಯುತ್ತಾರೆ. ಇದು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ಭಾರತೀಯ ಸಮುದಾಯಗಳಲ್ಲಿ ಅತ್ಯಂತ ವ್ಯಾಪಕವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ. ದೀಪಾವಳಿ ಹಬ್ಬವು

Live Cricket

Add Your Heading Text Here