Download Our App

Follow us

Home » ಫ್ಲ್ಯಾಶ್ ನ್ಯೂಸ್ » ಡಿಜೆ ವಾಹನಕ್ಕೆ ಹೈಟೆನ್ಷನ್​ ವಿದ್ಯುತ್​ ತಂತಿ ತಗುಲಿ ಭಾರೀ ದುರಂತ – 9 ಮಂದಿ ಸಾವು..!

ಡಿಜೆ ವಾಹನಕ್ಕೆ ಹೈಟೆನ್ಷನ್​ ವಿದ್ಯುತ್​ ತಂತಿ ತಗುಲಿ ಭಾರೀ ದುರಂತ – 9 ಮಂದಿ ಸಾವು..!

ಬಿಹಾರ : ಡಿಜೆ ವಾಹನಕ್ಕೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ ಹೊಡೆದು 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬಿಹಾರದ ಸುಲ್ತಾನ್​​​ಪುರ ಗ್ರಾಮದಲ್ಲಿ ನಡೆದಿದೆ.

ಕನ್ವರ್ ಯಾತ್ರೆಯಲ್ಲಿ ಮಧ್ಯರಾತ್ರಿ ವೇಳೆ ಡಿಜೆ ವಾಹನ ಸಂಚರಿಸುವಾಗ ಹೈಟೆನ್ಷನ್​ ತಂತಿ ತಗುಲಿದ್ದು, ಡಿಜೆ ವಾಹನವು ತುಂಬಾ ಎತ್ತರವಾಗಿದ್ದರಿಂದ ರಾತ್ರಿ ವೇಳೆ ಹೈಟೆನ್ಷನ್​ ತಂತಿ​ ಅಡ್ಡಲಾಗಿ ಹಾದು ಹೋಗಿದ್ದು ಕಾಣಿಸಿಲ್ಲ. ಹೀಗಾಗಿ ಈ ದುರಂತ ಸಂಭವಿಸಿದೆ.

ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮುಂದುವರೆದ ಡೆಂಘೀ ಆರ್ಭಟ – ಸೋಂಕಿತರ ಸಂಖ್ಯೆ 19543ಕ್ಕೆ ಏರಿಕೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here