Download Our App

Follow us

Home » ಜಿಲ್ಲೆ » ಭರ್ಜರಿ ಮಳೆಯಿಂದ ಕಾವೇರಿಗೆ ಜೀವಕಳೆ – ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ಭರ್ಜರಿ ಮಳೆಯಿಂದ ಕಾವೇರಿಗೆ ಜೀವಕಳೆ – ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ಮಂಡ್ಯ : ಬೇಸಿಗೆಯಿಂದ ಎಲ್ಲಾ ಜಲಾಶಯಗಳ ನೀರು ಬತ್ತಿ ಹೋಗಿತ್ತು. ಅದರಲ್ಲೂ ಮಳೆ ಇಲ್ಲದೇ ಜನ ಕಂಗಾಲಾಗಿದ್ದರು. ಸದ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದ್ದು, ಕೆಆರ್​​ಎಸ್​​​​ ಡ್ಯಾಂ ನೀರಿನ ಮಟ್ಟ ಏರಿಕೆಯಾಗಿದೆ. ಕೆಆರ್​​​ಎಸ್‌ ಜಲಾಶಯದ ನೀರಿನ ಒಳಹರಿವಿನಲ್ಲಿ ಕೂಡ ದಿಢೀರ್‌ ಏರಿಕೆ ಕಂಡು ಬಂದಿದೆ.

ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂ‌ಗೆ 36,674 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಕ್ಷಣ ಕ್ಷಣಕ್ಕೂ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಸದ್ಯ 110.60 ಅಡಿಗೆ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ತಲುಪಿದೆ.

24 ಗಂಟೆಯಲ್ಲಿ 3 ಅಡಿ ನೀರು ಹೆಚ್ಚಳವಾಗಿದೆ. ನಿನ್ನೆ 107.60 ಅಡಿ ಇದ್ದ ಕೆಆರ್‌ಎಸ್ ನೀರಿನ ಮಟ್ಟ, ಇಂದು 110.60 ಅಡಿಗೆ ತಲುಪಿದೆ.ಕೆಆರ್‌ಎಸ್ ಡ್ಯಾಂನ ನೀರಿನ ಸಂಗ್ರಹದಲ್ಲಿ ಭಾರೀ ಏರಿಕೆ ಕಂಡಿದ್ದು, 24 ಗಂಟೆಯಲ್ಲಿ 3 ಟಿಎಂಸಿ ನೀರು ಕೆಆರ್‌ಎಸ್​ಗೆ ಹರಿದು‌ ಬಂದಿದೆ.

ನಿನ್ನೆ ಕೆಆರ್‌ಎಸ್‌ನಲ್ಲಿ 29.378 ಟಿಎಂಸಿ ನೀರು ಸಂಗ್ರವಾಗಿತ್ತು. ಇಂದು 32.330 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವ ಹಂತದಲ್ಲಿದೆ. ಸದ್ಯ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ  ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಇಂದಿನ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

  • ಗರಿಷ್ಠ ಮಟ್ಟ – 124.80 ಅಡಿ.
  • ಇಂದಿನ ಮಟ್ಟ – 110.60 ಅಡಿ.
  • ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
  • ಇಂದಿನ ಸಾಮರ್ಥ್ಯ – 32.330 ಟಿಎಂಸಿ
  • ಒಳ ಹರಿವು – 36,674 ಕ್ಯೂಸೆಕ್
  • ಹೊರ ಹರಿವು – 2,361 ಕ್ಯೂಸೆಕ್

ಇದನ್ನೂ ಓದಿ : ಬೆಂಗಳೂರು : ಪಂಚೆ ಧರಿಸಿ ಬಂದ ರೈತನಿಗೆ ಜಿ.ಟಿ ಮಾಲ್​ ಅವಮಾನ – ಒಳ ಬಿಡದೆ ದರ್ಪ ತೋರಿದ ​​​ಸಿಬ್ಬಂದಿ..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ – ಸ್ಥಳದಲ್ಲೇ ಮಹಿಳೆ ಸಾವು..!

ಚಿತ್ರದುರ್ಗ : ಕೆಟ್ಟು ನಿಂತಿದ್ದ ಮೈನ್ಸ್ ಲಾರಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದು ಒರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 4ರ ಬಳ್ಳೇಕಟ್ಟೆ ಬ್ರಿಡ್ಜ್

Live Cricket

Add Your Heading Text Here