ಚಿತ್ರದುರ್ಗ : ಕೆಟ್ಟು ನಿಂತಿದ್ದ ಮೈನ್ಸ್ ಲಾರಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದು ಒರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 4ರ ಬಳ್ಳೇಕಟ್ಟೆ ಬ್ರಿಡ್ಜ್ ಬಳಿ ನಡೆದಿದೆ. ಹಾವೇರಿ ಮೂಲದ ಸರೋಜಮ್ಮ (60) ಮೃತ ಮಹಿಳೆ.
ಆಂಬುಲೆನ್ಸ್ ನಲ್ಲಿ ಮೃತದೇಹ ಸಾಗಿಸುವ ವೇಳೆ ಅಪಘಾತವಾಗಿದ್ದು, ರಾಷ್ಟ್ರೀಯ ಹೆದ್ದಾರಿ 4ರ ಬಳ್ಳೇಕಟ್ಟೆ ಬ್ರಿಡ್ಜ್ ಬಳಿ ಚಾಲಕ ರಸ್ತೆಯಲ್ಲೇ ಲಾರಿ ನಿಲ್ಲಿಸಿ ರಿಪೇರಿ ಮಾಡುತ್ತಿದ್ದ. ಆಂಬುಲೆನ್ಸ್ ಬೆಂಗಳೂರಿನಿಂದ ಹಾವೇರಿಗೆ ಕಡೆಗೆ ಹೋಗುತ್ತಿತ್ತು. ವೇಗವಾಗಿ ಬಂದ ಆಂಬುಲೆನ್ಸ್ ಲಾರಿಯನ್ನು ಗಮನಿಸದೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಒರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಂಬುಲೆನ್ಸ್ ಚಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದೆ. ಮೈನ್ಸ್ ಲಾರಿ ಚಾಲಕನ ಯಡವಟ್ಟಿನಿಂದ ಈ ದುರ್ಘಟನೆ ಸಂಭಸಿದ್ದು, ಭರಮಸಾಗರ ಪೊಲೀಸ್ ಠಾಣಾಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ : ಆಲಂಬಗಿರಿ ಕ್ಷೇತ್ರದಲ್ಲಿ ರಾಶಿ ರಾಶಿ ನಾಗರಕಲ್ಲುಗಳು ಪತ್ತೆ..!