Download Our App

Follow us

Home » ರಾಜ್ಯ » ಕೋಳಿ ಮೊಟ್ಟೆಗೂ ತಟ್ಟಿದ ಬಿಸಿಲಿನ ತಾಪ – ಮೊಟ್ಟೆಗಳ ಉತ್ಪಾದನೆ ಇಳಿಕೆಯಿಂದ ಅಂಗಡಿಗಳಲ್ಲಿ ದರ ಏರಿಕೆ..!

ಕೋಳಿ ಮೊಟ್ಟೆಗೂ ತಟ್ಟಿದ ಬಿಸಿಲಿನ ತಾಪ – ಮೊಟ್ಟೆಗಳ ಉತ್ಪಾದನೆ ಇಳಿಕೆಯಿಂದ ಅಂಗಡಿಗಳಲ್ಲಿ ದರ ಏರಿಕೆ..!

ಬೆಂಗಳೂರು : ಬೇಸಿಗೆಯ ಬಿಸಿಲಿನ ನರ್ತನ ರಾಜ್ಯದಲ್ಲಿ ಜೋರಾಗಿದೆ. ಉರಿ ಬಿಸಿಲಿನ ಸೆಕೆ ಕೇವಲ ಮನುಷ್ಯರಿಗೆ ಮಾತ್ರವಲ್ಲ, ಕೋಳಿ ಮೊಟ್ಟೆಗೂ ತಟ್ಟಿದೆ. ವಾತಾವರಣದ ಉಷ್ಣಾಂಶದಲ್ಲಿ ಪ್ರತಿನಿತ್ಯ 2 ರಿಂದ 3 ಡಿಗ್ರಿ ಸೆಲ್ಸಿಯಸ್ ನಿರಂತರ ಏರಿಕೆ ಆಗುತ್ತಿದೆ. ಇದರಿಂದ ಮೊಟ್ಟೆ ಉತ್ಪಾದನೆ, ಕೋಳಿ ಸಾಕಾಣಿಕೆ ಮೇಲೆ ಭಾರೀ ಹೊಡೆತ ಬೀಳುತ್ತಿದೆ. ಬಿಸಿಲಿನ ಹೊಡೆತಕ್ಕೆ ಕೋಳಿಗಳು ಸಾವನ್ನಪ್ಪುತ್ತಿವೆ.

ಒಂದು ಅಂದಾಜಿನ ಪ್ರಕಾರ ದಿನಕ್ಕೆ ಸರಿ ಸುಮಾರು 12 ಲಕ್ಷ ಮೊಟ್ಟೆಗಳ ಉತ್ಪಾದನೆ ಆಗುತ್ತಿದ್ದವು. ಆದರೆ, ಕಳೆದ 15 ದಿನಗಳಲ್ಲಿ ಬಿಸಿಲಿನ ಧಗೆಯಿಂದ ಮೊಟ್ಟೆ ಉತ್ಪಾದನೆಯಲ್ಲಿ ಶೇಕಡಾ 15 ರಿಂದ 20 ರಷ್ಟು ಇಳಿಕೆ ಕಂಡಿದೆ.

ಬಿಸಿಲಿನಿಂದ ಕೋಳಿಗಳಿಗೆ ರೋಗ ಕೂಡ ಹೆಚ್ಚಾಗುತ್ತಿದ್ದು, ಮೊಟ್ಟೆಗಳ ಉತ್ಪಾದನೆ ಇಳಿಕೆಯಿಂದ ಅಂಗಡಿಗಳಲ್ಲಿ ದರ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ 1 ಮೊಟ್ಟೆಗೆ 6.50 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ.

ಕರ್ನಾಟಕ ಮೊಟ್ಟೆ ಉತ್ಪಾದನೆಯಲ್ಲಿ 5ನೇ ಸ್ಥಾನ ಹೊಂದಿದೆ. ಸಾಮಾನ್ಯವಾಗಿ ಒಂದು ಕೋಳಿ 20 ವಾರದಿಂದ 80 ವಾರಗಳವರೆಗೆ ನಿರಂತರವಾಗಿ ಮೊಟ್ಟೆ ಇಡುತ್ತದೆ. ಒಂದು ಕೋಳಿ 75 ವಾರದೊಳಗೆ ಸುಮಾರು 330 ಮೊಟ್ಟೆ ಇಡುತ್ತದೆ. ಆದರೆ ಉಷ್ಣಾಂಶ ಏರಿಕೆ ಹಿನ್ನೆಲೆ ಮೊಟ್ಟೆ ಇಡುವುದರಲ್ಲಿ ಇಳಿಕೆ ಆಗಿದೆ. ಮಾಂಸದ ಕೋಳಿಗಳು ಅತಿಯಾದ ಉಷ್ಣಾಂಶಕ್ಕೆ ತುತ್ತಾಗಿ ಕೋಳಿಗಳು ಸಾವನ್ನಪ್ಪುತ್ತಿವೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮತ್ತೊಂದು ಭಾರೀ ಅಗ್ನಿ ಅವಘಡ – ಧಗಧಗನೆ ಹೊತ್ತಿ ಉರಿದ ಟೈರ್ ಗೋಡೌನ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here