Download Our App

Follow us

Home » ರಾಜಕೀಯ » ಪುತ್ರ ಪ್ರಜ್ವಲ್ ಹೆಸರಲ್ಲಿ ತಾಯಿ ಚಾಮುಂಡೇಶ್ವರಿಗೆ ಅರ್ಚನೆ ಮಾಡಿಸಿದ ಹೆಚ್​.ಡಿ ರೇವಣ್ಣ..!

ಪುತ್ರ ಪ್ರಜ್ವಲ್ ಹೆಸರಲ್ಲಿ ತಾಯಿ ಚಾಮುಂಡೇಶ್ವರಿಗೆ ಅರ್ಚನೆ ಮಾಡಿಸಿದ ಹೆಚ್​.ಡಿ ರೇವಣ್ಣ..!

ಬೆಂಗಳೂರು : ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಜೈಲು ಸೇರಿದ್ದ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ನಿನ್ನೆ ಜಾಮೀನು ಸಿಕ್ಕಿದ್ದು, ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆದ ರೇವಣ್ಣ ಅವರು ಮೊದಲಿಗೆ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು.

ದೇವೇಗೌಡರ ನಿವಾಸದಲ್ಲಿ ರೇವಣ್ಣ ಕುಟುಂಬಸ್ಥರ ಜೊತೆ ಮಾತನಾಡಿದ ಬಳಿಕ ತಮ್ಮ ಟೆಂಪಲ್ ರನ್ ಶುರು ಮಾಡಿದರು. ಮೊದಲಿಗೆ ರೇವಣ್ಣ, ದೇವೇಗೌಡ್ರ ನಿವಾಸದಿಂದ ನೇರವಾಗಿ ಬಸವನಗುಡಿಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತದನಂತರ ಬನಶಂಕರಿಯ ತಮ್ಮ ನಿವಾಸಕ್ಕೆ ಆಗಮಿಸಿ ಅಲ್ಲಿಗೂ ಸಹ ದೇವರ ಪ್ರಾರ್ಥನೆ ಮಾಡಿದರು. ಅಲ್ಲಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇನ್ನು, ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಸಿಲುಕಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪುತ್ರ ಪ್ರಜ್ವಲ್ ರೇವಣ್ಣ ಹೆಸರಿನಲ್ಲೂ ಸಹ ವಿಶೇಷ ಪೂಜೆ ಮಾಡಿಸಿದರು. ಕುಟುಂಬದ ಪ್ರತಿಯೊಬ್ಬರ ಹೆಸರು ಹಾಗೂ ನಕ್ಷತ್ರ ಹೇಳಿ ಅರ್ಚನೆ ಮಾಡಿಸಿದರು. ಬಳಿಕ ದೇವಾಲಯದಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಏಕಾಂಗಿಯಾಗಿ ಕುಳಿತು ದೇವಿಗೆ ಪ್ರಾರ್ಥನೆ ಮಾಡಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ತಾಯಿ ಚಾಮುಂಡೇಶ್ವರಿ ಮೇಲೆ ನನಗೆ ನಂಬಿಕೆ ಇದೆ. ದೇವರು ಹಾಗೂ ರಾಜ್ಯದ ಜನರ ಮೇಲೆ ನಂಬಿಕೆ ಇದೆ. ತಾಯಿ ಚಾಮುಂಡೇಶ್ವರಿ ಕರುಣೆ ತೋರಿಸುತ್ತಾಳೆ ನೋಡೋಣ. ಉದ್ದೇಶಪೂರ್ವಕವಾಗಿ ಮಾಡಿದ್ದರೆ ಅದನ್ನು ತಾಯಿಗೆ ಬಿಟ್ಟಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣ ಇದೆ ಹೆಚ್ಚು ಮಾತನಾಡಲ್ಲ ಎಂದು ಹೆಚ್​.ಡಿ.ರೇವಣ್ಣ ಹೇಳಿದರು.

ಇದನ್ನೂ ಓದಿ : ಜೈಲಿನಿಂದ ರಿಲೀಸ್ ಆಗಿ ಮನೆಗೆ ಬರ್ತಿದ್ದಂತೆ ತಂದೆ-ತಾಯಿ ಕಾಲಿಗೆ ಬಿದ್ದ ರೇವಣ್ಣ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here