ಹಾಸನ : ಏಕಾಏಕಿ ಕೋತಿಯೊಂದು ಮದುವೆ ಮನೆಗೆ ನುಗ್ಗಿ ಎಂಟು ಜನರಿಗೆ ಕಚ್ಚಿ ದಾಂಧಲೆ ಮಾಡಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆಯಲ್ಲಿ ನಡೆದಿದೆ. ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ, ತಿಮ್ಮೇಗೌಡ, ಗಿರಿಗೌಡ ಎಂಬುವವರಿಗೆ ಕೋತಿ ಕಚ್ಚಿದೆ.
ಹಾಸನದಲ್ಲಿ ಮದುವೆ ಮನೆಗೆ ನುಗ್ಗಿದ ಕೋತಿ ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದೆ. ಬಳಿಕ ಒಬ್ಬರಲ್ಲ..ಇಬ್ಬರಲ್ಲ..ಬರೋಬ್ಬರಿ ಎಂಟು ಜನರಿಗೆ ಕೋತಿ ಕಚ್ಚಿ ಗಾಯಗೊಳಿಸಿದೆ. ಸದ್ಯ ಗಾಯಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೋತಿ ಹಿಡಿದು ಸ್ಥಳಾಂತರ ಮಾಡಲು ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬಾಹ್ಯಾಕಾಶಕ್ಕೆ ತೆರಳುತ್ತಾರಾ ಪ್ರಧಾನಿ ಮೋದಿ? ಇಸ್ರೊ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದೇನು?
Post Views: 159