Download Our App

Follow us

Home » ರಾಜಕೀಯ » ಹಾಸನ ಲೋಕಸಭಾ ಕ್ಷೇತ್ರದತ್ತ ಎಲ್ಲರ ಚಿತ್ತ – ಪ್ರಜ್ವಲ್​ ರೇವಣ್ಣಗೆ ಮುನ್ನಡೆ, ಕಾಂಗ್ರೆಸ್​ ಅಭ್ಯರ್ಥಿಗೆ ಹಿನ್ನಡೆ ..!

ಹಾಸನ ಲೋಕಸಭಾ ಕ್ಷೇತ್ರದತ್ತ ಎಲ್ಲರ ಚಿತ್ತ – ಪ್ರಜ್ವಲ್​ ರೇವಣ್ಣಗೆ ಮುನ್ನಡೆ, ಕಾಂಗ್ರೆಸ್​ ಅಭ್ಯರ್ಥಿಗೆ ಹಿನ್ನಡೆ ..!

ಹಾಸನ : ರಾಜ್ಯದ 28 ಕ್ಷೇತ್ರಗಳಲ್ಲಿ ಹಾಸನವು ಈ ಬಾರಿ ಅತಿ ಹೆಚ್ಚು ಗಮನ ಸೆಳೆದ ಕ್ಷೇತ್ರ. ಅದಕ್ಕೆ ಕಾರಣವೂ ಉಂಟು. ಲೋಕಸಭೆ ಚುನಾವಣೆಯ ನಡುವೆ ಭಾರತ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿದ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣದ ನಡುವೆಯೇ ಅಲ್ಲಿನ ಫಲಿತಾಂಶ ಏನಾಗಬಹುದು ಎನ್ನುವ ಕುತೂಹಲ ಇದೀಗ ಹೆಚ್ಚಾಗಿದೆ. ಪ್ರಜ್ವಲ್​ ರೇವಣ್ಣ ಮುನ್ನಡೆ ಸಾಧಿಸಿದ್ದಾರೆ.

ಬೆ. 9:30ರ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ಹಿನ್ನಡೆ ಇದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಯ ಹೊರತು ಇದೀಗ ಹೊರಬೀಳುತ್ತಿರುವ ಫಲಿತಾಂಶ ನೋಡಿದ್ರೆ ಮತದಾರರು ಅಚ್ಚರಿ ಮೂಡಿಸಿದ್ದಾರೆ.

ಏಳನೇ ಸುತ್ತಿನ ಮುಕ್ತಾಯ – ಮುನ್ನಡೆ ಕಾಯ್ದುಕೊಂಡ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 3174 ಮತಗಳಿಂದ ಪ್ರಜ್ವಲ್ ಮುಂದಿದ್ದಾರೆ.

  • ಜೆಡಿಎಸ್ –  292653
  • ಕಾಂಗ್ರೆಸ್  – 289479

ಮತದಾರರ ಮಾಹಿತಿ: ನಡೆದ ಚುನಾವಣೆಯಲ್ಲಿ ಸೇವಾ ಮತದಾರರು ಸೇರಿದಂತೆ ಕ್ಷೇತ್ರದ ಒಟ್ಟು 17,38,818 ಮತದಾರರಲ್ಲಿ 8,63,727 ಪುರುಷರು, 8,72,840 ಮಹಿಳೆಯರು, 43 ಇತರೆ, 2,208 ಸೇವಾ ಮತದಾರರನ್ನು ಹೊಂದಿದೆ. 2019ರಲ್ಲಿ ಚುನಾವಣೆಯಲ್ಲಿ ಶೇ. 72.13ರಷ್ಟು ಮತದಾನದ ಪ್ರಮಾಣ ದಾಖಲಾಗಿದ್ದರೆ, 2024ರ ಚುನಾವಣೆಯಲ್ಲಿ ಶೇ. 77.01ರಷ್ಟು ಮತದಾನದ ಪ್ರಮಾಣ ದಾಖಲಾಗಿತ್ತು.

ಇದನ್ನೂ ಓದಿ : ಶಿವಮೊಗ್ಗ ಲೋಕಸಭಾ ಕ್ಷೇತ್ರ : ಬಿಜೆಪಿ ಬಿ.ವೈ. ರಾಘವೇಂದ್ರಗೆ ಮುನ್ನಡೆ, ಗೀತಾ, K.S. ಈಶ್ವರಪ್ಪಗೆ ಹಿನ್ನಡೆ..!

Leave a Comment

DG Ad

RELATED LATEST NEWS

Top Headlines

ಹರ್ಮನ್ ಪಡೆ ಅಬ್ಬರಕ್ಕೆ ಪಾಕ್ ಧೂಳಿಪಟ – ಏಷ್ಯಾಕಪ್‌ನಲ್ಲಿ ಭಾರತಕ್ಕೆ ಗೆಲುವಿನ ಶುಭಾರಂಭ..!

ದಂಬುಲ್ಲಾ : ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಭಾರತ-ಪಾಕಿಸ್ತಾನ ಮಹಿಳಾ ತಂಡಗಳ ಏಷ್ಯಾಕಪ್ ಪಂದ್ಯದಲ್ಲಿ ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ, ಪಾಕ್

Live Cricket

Add Your Heading Text Here