Download Our App

Follow us

Home » ಸಿನಿಮಾ » ಹನುಮಂತು ಮುಗ್ದನಾ.. ಬುದ್ದಿವಂತನಾ? ಮನೆಯವರ ಅಭಿಪ್ರಾಯ ಕೇಳಿ ಸಿಂಗರ್​​ ಶಾಕ್..!​​

ಹನುಮಂತು ಮುಗ್ದನಾ.. ಬುದ್ದಿವಂತನಾ? ಮನೆಯವರ ಅಭಿಪ್ರಾಯ ಕೇಳಿ ಸಿಂಗರ್​​ ಶಾಕ್..!​​

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ಬಿಗ್​ ಬಾಸ್​​​’ನ ಪ್ರಮುಖ ಆಕರ್ಷಣೆ ಅಂದ್ರೆ ಅದು ಅಭಿನಯ ಚಕ್ರವರ್ತಿ ಸುದೀಪ್ ಅವರು​​. ಇತ್ತೀಚೆಗಷ್ಟೇ ಸುದೀಪ್​ ಅವರ ತಾಯಿ ನಿಧನರಾದರು. ಅಮ್ಮನ ಅಗಲಿಕೆಯ ನೋವಿನಲ್ಲಿರುವ ಸುದೀಪ್​ ಅವರು ಈ ವಾರ ಪಂಚಾಯ್ತಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿಲ್ಲ. ಹೀಗಾಗಿ ಬಿಗ್ ಬಾಸ್ ಮನೆಯ ಪಂಚಾಯಿತಿ ನಡೆಸಲು ಯೋಗರಾಜ್ ಭಟ್ ಬಂದಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿ ಮತ್ತೊಂದು ಪ್ರೋಮೋ ಬಿಡುಗಡೆ ಮಾಡಿ ಆಡಿಯನ್ಸ್​ನ ಕುತೂಹಲ ಕೆರಳಿಸಿದೆ. ಹೌದು, ”ಮನೆಯವರ ಅಭಿಪ್ರಾಯ ಕೇಳಿ ತಬ್ಬಿಬ್ಬಾದನಾ ಹನುಮಂತು?” ಎಂಬ ಕ್ಯಾಪ್ಷನ್​ನೊಂದಿಗೆ ಮತ್ತೊಂದು ಪ್ರೋಮೋ ಅನಾವರಣಗೊಂಡಿದೆ.

ಕನ್ನಡ ಬಿಗ್​ ಬಾಸ್​ನ ಪಂಚಾಯ್ತಿ ನಡೆಸಿಕೊಡಲು ಬಂದ ಯೋಗರಾಜ್​ ಭಟ್​​​ ಅವರು, ‘ಹನುಮಂತು ನಿಜವಾಗ್ಲೂ ಇನೋಸೆಂಟ್​ (ಮುಗ್ಧ) ಆ? ಅಥವಾ ಸ್ಮಾರ್ಟ್ ಆಗಿದ್ದಾನಾ?’ ಎಂಬ ಪ್ರಶ್ನೆಯನ್ನು ಮನೆಮಂದಿ ಬಳಿ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಶಿಶಿರ್​, ಸರ್ ಬುದ್ಧಿವಂತಿಕೆ ಒಂತೂ ಇದೆ. ದಡ್ಡ ಅಂತೂ ಅಲ್ಲಾ ಸರ್​ ಎಂದು ಹೇಳಿದ್ದಾರೆ.

ಮತ್ತೊಂದೆಡೆ ತ್ರಿವಿಕ್ರಮ್​ ಮಾತನಾಡಿ, ಅಷ್ಟಿಲ್ಲದೇ ಅಷ್ಟೊಂದು ಶೋಗಳನ್ನು ಮಾಡಿಕೊಂಡು, ಗೆದ್ದುಕೊಂಡು ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ನಂತರ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ ಅನ್ಸುತ್ತಾ ಎಂದು ಭಟ್ರು ಮರು ಪ್ರಶ್ನಿಸಿದ್ದಾರೆ. ತಲೆ ಇದ್ದೇ ಅವರು ಬಂದಿದ್ದಾರೆ, ತಲೆ ಇದ್ದೇ ಅವರು ಆಟ ಆಡ್ತಿದ್ದಾರೆ, ತಲೆ ಇದ್ದೇ ಇದ್ದಾರೆ ಎಂದು ತ್ರಿವಿಕ್ರಮ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಾತು ಮುಂದುವರಿಸಿದ ನಿರ್ದೇಶಕ ಯೋಗರಾಜ್​ ಭಟ್​, ‘ಹನುಮಂತ, ಬಹಳ ಕಂತ್ರಿ ಇದ್ದೀಯಾ ಅಂದ್ರೆ, ಬಹಳ ಖತರ್ನಾಕ್​ ಇದ್ದೀಯಾ ಅಂದ್ರೆ ಹೇಳ್ಬಿಡು’ ಎಂದು ಹನುಮಂತು ಬಳಿ ತಿಳಿಸಿದ್ದಾರೆ. ಇದರ ಸಂಪೂರ್ಣ ಭಾಗ ವೀಕ್ಷಿಸಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ : ಇಸ್ರೇಲ್​ ದಾಳಿಗೆ ಇರಾನ್​​​​ನ ಇಬ್ಬರು ಸೈನಿಕರು ಬಲಿ..!

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here