Download Our App

Follow us

Home » ಸಿನಿಮಾ » ‘ಹೈನ’ ಸಿನಿಮಾ ಆಡಿಯೋ ರೈಟ್ಸ್ zee ಮ್ಯೂಸಿಕ್ ತೆಕ್ಕೆಗೆ..!

‘ಹೈನ’ ಸಿನಿಮಾ ಆಡಿಯೋ ರೈಟ್ಸ್ zee ಮ್ಯೂಸಿಕ್ ತೆಕ್ಕೆಗೆ..!

ಅಮೃತ ಫಿಲಂ ಸೆಂಟರ್ ಮತ್ತು ಕೆ.ಕೆ ಕಂಬೈನ್ಸ್ ಆಡಿಯಲ್ಲಿ ತಯಾರಾಗಿರುವ ಚಿತ್ರ ಹೈನದ ಆಡಿಯೋ ರೈಟ್ಸ್ zee ಮ್ಯೂಸಿಕ್ ತೆಕ್ಕೆಗೆ ಸೇರಿದೆ . ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಸುದ್ದಿಯನ್ನು ಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ 4 ಹಾಡುಗಳಿದ್ದು ಎಲ್ಲ ವಯಸ್ಸಿನ ಜನರಿಗೆ ಇಷ್ಟವಾಗುವಂಥ ಸಾಹಿತ್ಯ ಸಂಗೀತ ಮತ್ತು ಅದ್ಭುತವಾದ ದೃಶ್ಯಗಳನ್ನು ಸಂಯೋಜಿಸಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಪ್ರಮುಖವಾಗಿ ಈ ಚಿತ್ರದಲ್ಲಿ ಕನ್ನಡ RAP ಹೈನ ಶೀರ್ಷಿಕೆ ಸಂಗೀತ ಕಾರ್ತಿಕ್ ಗುಬ್ಬಿ ಹಾಡಿದ್ದಾರೆ ಅದೇ ಚಿತ್ರದ ಹೈಲೈಟ್ ಆಗಿದೆ.

ಸುಮಾರು 52ಕ್ಕೂ ಅಧಿಕ ತಾರಾಗಣ ಬಳಗ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದೆ. ಭಾರತ – ಬಾಂಗ್ಲಾದೇಶ ಗಡಿಯಲ್ಲಿ ಮತ್ತು ತುಂಬಾ ಅತಿ ಸೂಕ್ಷ್ಮವಾದ ಪ್ರದೇಶಗಳಲ್ಲಿ ಈ ಚಿತ್ರ ತಂಡ ದೃಶ್ಯಗಳನ್ನು ಚಿತ್ರೀಕರಿಸಿದೆ. ಹೈನ ಚಿತ್ರ ನಿಜ ಘಟನೆ ಆಧಾರ ಚಿತ್ರವಾಗಿದ್ದು ಹೈನ ಚಿತ್ರವೂ ಅತಿ ಶೀಘ್ರದಲ್ಲಿ ಬೆಳ್ಳಿ ತೆರೆಮೇಲೆ ಬಿಡುಗಡೆ ಆಗಲಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿರುವ ಚಿತ್ರಕ್ಕೆ, ಲವ್ ಪ್ರಾನ್ ಮೆಹ್ತಾ ಸಂಗೀತ , ನಿಶಾಂತ್ ನಾಣಿ ಚಿತ್ರಕ್ಕೆ ಛಾಯಾಗ್ರಹಣ., ಲಕ್ಷ್ಮಣ್ ಶಿವಶಂಕರ್ ಸಂಭಾಷಣೆ ಮತ್ತು ಶಮೀಕ್ ಭಾರದ್ವಾಜ್ ರವರ ಸಂಕಲನವಿದೆ.

ಇನ್ನು ಚಿತ್ರದ ತಾರಾಗಣದಲ್ಲಿ ಡಾ:ರಾಜ್ ಕಮಲ್, ಹರ್ಷ್ ಅರ್ಜುನ್ ಕಲಾಲ್, ದಿಗಂತ್, ಲಕ್ಷ್ಮಣ್ ಶಿವಶಂಕರ್, ನಿರಂಜನ್, ವೆಂಕಟ್ ಭಾರದ್ವಾಜ್, ಶಿಶಿರ್ ಕುಮಾರ್, ನಂದಕುಮಾರ್, ಮನೋಹರ್, ಅಭಿಷೇಕ್ ಐಯಂಗಾರ್ , ಲಾರೆನ್ಸ್ಹಾ ಪ್ರೀತಮ್ ಹಾಗು ಇತರರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ : ಬಳ್ಳಾರಿ ಅಡಿಷನಲ್ SP ಕೆ.ಪಿ ರವಿಕುಮಾರ್ ಹೆಸರಲ್ಲಿ ಫೇಕ್ ಅಕೌಂಟ್‌ ತೆರೆದು ಹಣಕ್ಕೆ ಬೇಡಿಕೆಯಿಟ್ಟ ಸೈಬರ್ ವಂಚಕರು..!

Leave a Comment

DG Ad

RELATED LATEST NEWS

Top Headlines

ಲಂಚಕ್ಕೆ ಬೇಡಿಕೆ : ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ವೈಟ್ ಫಿಲ್ಡ್ ಠಾಣೆ PSI ಗಂಗಾಧರ್..!

ಬೆಂಗಳೂರು : ಕೇಸ್ ವೊಂದರ ಆರೋಪಿಯನ್ನ ಬಂಧಿಸಲು ಲಂಚಕ್ಕೆ ಬೇಡಿಕೆ ಇಟ್ಟ ವೈಟ್ ಫಿಲ್ಡ್ ಠಾಣೆ PSI ಗಂಗಾಧರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Live Cricket

Add Your Heading Text Here