Download Our App

Follow us

Home » ಸಿನಿಮಾ » ಮೋಷನ್ ಪೋಸ್ಟರ್​ನಲ್ಲೇ ಕುತೂಹಲ ಮೂಡಿಸಿದ “ಹಗ್ಗ” ಸಿನಿಮಾ ಆಗಸ್ಟ್​ನಲ್ಲಿ ತೆರೆಗೆ..!

ಮೋಷನ್ ಪೋಸ್ಟರ್​ನಲ್ಲೇ ಕುತೂಹಲ ಮೂಡಿಸಿದ “ಹಗ್ಗ” ಸಿನಿಮಾ ಆಗಸ್ಟ್​ನಲ್ಲಿ ತೆರೆಗೆ..!

ದಶಕಗಳ ಹಿಂದೆ ನಾಯಕಿ ನಟಿಯಾಗಿ ಮಿಂಚಿದ್ದ ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್ ನಟನೆಯ ‘ಹಗ್ಗ’ ಚಿತ್ರದ ಮೋಷನ್ ಪೋಸ್ಟರ್ ಇತ್ತಿಚಿಗೆ ಬಿಡುಗಡೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ.

ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್ ನಿರ್ದೇಶನದ “ಹಗ್ಗ” ಚಿತ್ರದಲ್ಲಿ ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಮೇಕಿಂಗ್​ನಲ್ಲೇ ಸದ್ದು ಮಾಡಿರುವ ಈ ಚಿತ್ರದ ಮೋಷನ್ ಪೋಸ್ಟರ್​ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇನ್ನು ಚಿತ್ರ ಆಗಸ್ಟ್ ನಲ್ಲಿ ತೆರೆಗೆ ಬರಲಿದೆ.

ನಿರ್ಮಾಪಕ ರಾಜ್ ಭಾರದ್ವಾಜ್ ಅವರೆ “ಹಗ್ಗ” ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ ರಾಜ್ ಭಾರದ್ವಾಜ್, ಅವಿನಾಶ್ ಹಾಗೂ ಮನೋಹರ್ ಅವರದು. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಮನೋಹರ್ ಎಸ್​ಪಿ ಸಂಭಾಷಣೆ ಬರೆದಿದ್ದಾರೆ.

ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ, ತಬಲನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ : ‘ಹಾಯ್ ಫ್ರೆಂಡ್ಸ್’ ಎನ್ನುತ್ತ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ರೀಲ್ಸ್ ರೇಷ್ಮಾ ಧೀಡಿರ್ ಆಸ್ಪತ್ರೆಗೆ ದಾಖಲು : ಆಗಿದ್ದೇನು ಗೊತ್ತಾ 

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಖಾಸಗಿ ಬಸ್ಸನ್ನೇ ಕದ್ದು ಎಸ್ಕೇಪ್ ಆಗಿರೋ ಖತರ್ನಾಕ್ ಕಳ್ಳರು..!

ಚಿತ್ರದುರ್ಗ : ಖಾಸಗಿ ಬಸ್​​ವೊಂದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಯಕನಹಟ್ಟಿ ಮೂಲದ SRE ಬಸ್ ಮಾಲೀಕ ಸಯ್ಯದ್

Live Cricket

Add Your Heading Text Here