ಬೆಂಗಳೂರು : ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್‌ಗೆ ಪಂಚೆ ಧರಿಸಿ ಬಂದಿದ್ದ ರೈತರೊಬ್ಬರನ್ನು ಒಳಗೆ ಬಿಡದೆ ಅವಮಾನ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲ್ ವಿರುದ್ಧ ಕೆಪಿ ಅಗ್ರಹಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೀಗ ಇದರ ಬೆನ್ನಲ್ಲೇ ಜಿಟಿ ಮಾಲ್‌ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.
ರೈತನಿಗೆ ಅವಮಾನ ಮಾಡಿದ GT ಮಾಲ್ನ್ನು ಒಂದು ವಾರ ಬಂದ್ ಮಾಡುವಂತೆ ಸಚಿವ ಭೈರತಿ ಸುರೇಶ್ ಘೋಷಿಸಿದ್ದಾರೆ. ಜಿ.ಟಿ ಮಾಲ್ ಪ್ರಕರಣ ಸದನದಲ್ಲೂ ಪ್ರತಿಧ್ವನಿಸಿದ್ದು, ಈ ವೇಳೆ ಪಂಚೆ ಉಟ್ಟು ಬಂದಿದ್ದ ರೈತ ಫಕೀರಪ್ಪರನ್ನ ತಡೆದಿದ್ದ ಮಾಲ್ ಸಿಬ್ಬಂದಿ ಹಾಗೂ ಮಾಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷಾತೀತವಾಗಿ ಆಗ್ರಹಿಸಿದ್ದಾರೆ. ಇದು ವ್ಯಕ್ತಿಯ ಘನತೆಗೆ ಸಂಬಂಧಿಸಿದ ವಿಚಾರ, G.T. ಮಾಲ್ ಬಂದ್ ಮಾಡಿಸಬೇಕು ಎಂದು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ್ದಾರೆ. ಸಚಿವ ಮಹದೇವಪ್ಪ ಕೂಡ ಮಾಲ್ ವಿರುದ್ಧ ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಸೂಚನೆ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ಜಿ.ಟಿ ಮಾಲ್ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ. ಒಂದು ವಾರಗಳ ಕಾಲ ಬಂದ್ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. ಕೆಲವೇ ಹೊತ್ತಲ್ಲಿ ವಲಯ ಆಯುಕ್ತರ ತಂಡ ಜಿ.ಟಿ ಮಾಲ್‌ಗೆ ತೆರಳಲಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಸೆ. 28ರಂದು ಸಿಂಗಾಪುರದಲ್ಲಿ ವಿಶ್ವ ಕನ್ನಡ ಹಬ್ಬ..!