Download Our App

Follow us

Home » ಮೆಟ್ರೋ » ತೆರಿಗೆ ಹೊರೆ ಇಳಿಕೆಗೆ ಸರ್ಕಾರದಿಂದ ಕ್ರಮ : ಬಿಬಿಎಂಪಿ ವಿಧೇಯಕಕ್ಕೆ ವಿಧಾನ ಸಭೆಯಲ್ಲಿ ಒಪ್ಪಿಗೆ..!

ತೆರಿಗೆ ಹೊರೆ ಇಳಿಕೆಗೆ ಸರ್ಕಾರದಿಂದ ಕ್ರಮ : ಬಿಬಿಎಂಪಿ ವಿಧೇಯಕಕ್ಕೆ ವಿಧಾನ ಸಭೆಯಲ್ಲಿ ಒಪ್ಪಿಗೆ..!

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಹೊರೆ ಇಳಿಕೆಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಬಿಬಿಎಂಪಿ ವಿಧೇಯಕಕ್ಕೆ ವಿಧಾನ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಹೊಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದರು. ಹಾಗಾಗಿ ವಸತಿ ಕಟ್ಟಡ, ವ್ಯಾಪಾರ ಕಟ್ಟಡ, ಖಾಲಿ ಸೈಟ್​ ತೆರಿಗೆ ಪರಿಷ್ಕರಣೆಗೆ ಒಪ್ಪಿಗೆ ಸಿಕ್ಕಿದೆ.

15 ಲಕ್ಷ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ವಿದೇಯಕ ಜಾರಿಯಾಗಲಿದೆ. ವಿಧೇಯಕದಲ್ಲಿ 5 ವರ್ಷದ ಹಿಂದಿನ ಹಿಂಬಾಕಿ ಕೈ ಬಿಡುವುದಕ್ಕೂ ಅವಕಾಶವಿದೆ. ಎರಡು ಕಂತುಗಳಲ್ಲಿ ತೆರಿಗೆ ಪಾವತಿಗೆಗೂ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ತೆರಿಗೆಯನ್ನು ಡಿಮಾಂಡ್ ಡ್ರಾಫ್ಟ್ ಅಥವಾ ಇ- ಪಾವತಿಯ ಮೂಲಕ ಪಾವತಿಸಲು ಅವಕಾಶ ನೀಡಿದ್ದಾರೆ.

ಮೊದಲ ಕಂತು ಪ್ರತಿ ಆರ್ಥಿಕ ವರ್ಷದ ಮೇ 30ರೊಳಗೆ ಪಾವತಿಸಬೇಕು, ಎರಡನೇ ಕಂತು ನವೆಂಬರ್ 29 ರೊಳಗಾಗಿ ಪಾವತಿಸಬೇಕು. ಒಂದೇ ಕಂತಿನಲ್ಲೂ ತೆರಿಗೆ ಪಾವತಿ ಮಾಡಲು ಅವಕಾಶವಿದೆ. ಸ್ವತ್ತುದಾರರು ಪ್ರತಿ ವರ್ಷದ ಮೊದಲ ತಿಂಗಳು ವಿವರ ಸಲ್ಲಿಸಬೇಕು, ವಿವರ ಪತ್ರ ಸಲ್ಲಿಸಿ ಕಂದಾಯ ಪಾವತಿ ಮಾಡಿದ್ರೆ ಶೇಕಾಡ 5% ರಿಯಾಯಿತಿ ಸಿಗಲಿದೆ.

ಇದನ್ನೂ ಓದಿ : IPS ಅಧಿಕಾರಿ ಪ್ರತಾಪ್ ರೆಡ್ಡಿ ರಾಜೀನಾಮೆ ಅಂಗೀಕರಿಸಿದ ಸರ್ಕಾರ‌..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಸವಾರ ದುರ್ಮರಣ..!

ಬೆಂಗಳೂರು : ನಗರದಲ್ಲಿ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಸವಾರ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್ 32 ವರ್ಷ ಅಪಘಾತದಲ್ಲಿ

Live Cricket

Add Your Heading Text Here