ಮೈಸೂರು : ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ. ನಾನು ತಪ್ಪು ಮಾಡಿಲ್ಲ, ರಾಜೀನಾಮೆ ಕೊಡಬೇಕಿಲ್ಲ ಎಂದು ದಸರಾ ಉದ್ಘಾಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಖಡಕ್ ಹೇಳಿಕೆ ನೀಡಿದ್ದಾರೆ.
ದಸರಾ ಉದ್ಘಾಟನೆ ಸಮಾರಂಭದಲ್ಲಿ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾವು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯೋ ಕೆಲಸ ಮಾಡಿದ್ದೇವೆ. ಆತ್ಮಸಾಕ್ಷಿ ನ್ಯಾಯಾಲಯ ಎಲ್ಲದಕ್ಕಿಂತ ದೊಡ್ಡದು. ಅರಸು ನಂತರ ಪೂರ್ಣಾವಧಿ ಸಿಎಂ ಆಗಿದ್ದು ನಾನು ಮಾತ್ರ. ಈಗಲೂ ನಮ್ಮ ಸರ್ಕಾರ ಐದು ವರ್ಷ ಇದ್ದೇ ಇರುತ್ತೆ ಎಂದು ತಿಳಿಸಿದ್ದಾರೆ.
ಇನ್ನು ನನ್ನ ಮೇಲೆ ತಾಯಿ ಚಾಮುಂಡಿ ಆಶೀರ್ವಾದ ಇದೆ. ಚಾಮುಂಡಿ ಆಶೀರ್ವಾದ ಇರೋದಕ್ಕೆ 9 ಬಾರಿ ಗೆದ್ದಿದ್ದೇನೆ. 40 ವರ್ಷ ಮಂತ್ರಿಯಾಗಿ ಕಳಂಕ ಇಲ್ಲದೇ ಬದುಕಿದ್ದೇನೆ. ಜನರು ನನ್ನ ಜೊತೆ ಇರೋವರೆಗೂ ಸರ್ಕಾರ ಅಲುಗಾಡದು. ರಂಗಿನ ಭಾಷಣದಿಂದ ಜನರ ಹೊಟ್ಟೆ ತುಂಬಿಸಲು ಆಗದು. ಜನರ ಬದುಕಿಗೆ ಶಕ್ತಿ ತುಂಬುವ ಕೆಲಸ ಆಗಬೇಕು. ನಾನು ಆತ್ಮಸಾಕ್ಷಿ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ : ‘ಕಲ್ಟ್’ ಶೂಟಿಂಗ್ ಸೆಟ್ನಲ್ಲಿ ಕನ್ನಡದ ಲೇಡಿ ಸೂಪರ್ ಸ್ಟಾರ್ ‘ರಚಿತಾ ರಾಮ್’ ಹುಟ್ಟುಹಬ್ಬ ಆಚರಣೆ..!