ಬೆಂಗಳೂರು : ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಕ್ಫ್ ಬೋರ್ಡ್ ವ್ಯಾಪ್ತಿಗೆ ಸೇರುವ ಮದರಸಾಗಳಲ್ಲಿ ಕನ್ನಡ ಕಲಿಕಾ ತರಗತಿಗಳನ್ನು ಆರಂಭಿಸಲು ಮುಂದಾಗಿತ್ತು. ಇದೀಗ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ.
ಕರ್ನಾಟಕದ ಮದರಸಾಗಳಲ್ಲಿ ಉರ್ದುವಿನಲ್ಲೇ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಾಗಾಗಿ ಮದರಸಾಗಳಲ್ಲಿ ಕನ್ನಡದಲ್ಲೇ ಪಾಠ ಮಾಡಬೇಕು. ವಾರದಲ್ಲಿ ಕನಿಷ್ಠ 2-3 ಗಂಟೆ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಬೋಧನೆ ಮಾಡಬೇಕು. ಆ ಮೂಲಕ ಮಕ್ಕಳು ಕನ್ನಡ ಕಲಿಯುವಂತಾಗಬೇಕು ಎಂಬ ದೃಷ್ಟಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯೋಜನೆ ರೂಪಿಸಲು ಮುಂದಾಗಿತ್ತು.
ಆದರೆ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿತ್ತು. ಈ ಹಿನ್ನಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ನಿರ್ಧಾರಕ್ಕೆ ಬಂದಿದೆ. ಮದರಸಾಗಳಲ್ಲಿ ಕನ್ನಡ ಕಲಿಕೆ ಸಂಬಂಧ ಬೀದರ್, ಕಲಬುರಗಿ, ವಿಜಯಪುರ, ಶಿಕ್ಷಣ ತಜ್ಞರು ಶೀಘ್ರ ಕಲಿಕೆ ಜಾರಿ ಮಾಡಲು ಒತ್ತಾಯಿಸಿದ್ದರು.
ನಂತರ ಮುಸ್ಲಿಂ ಸಾಹಿತಿಗಳ ನೆರವು ಪಡೆದು ಕನ್ನಡ ಬೋಧನೆಗೆ ತೀರ್ಮಾನಿಸಿದ್ದರು. ಇದೀಗ ಅಭಿವೃದ್ಧಿ ಪ್ರಾಧಿಕಾರದ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಿಂದಾಗಿ ಸರ್ಕಾರ ಯೋಜನೆಯನ್ನು ಕೈಬಿಡಲು ನಿರ್ಧಾರ ಮಾಡಿದೆ.
ಇದನ್ನೂ ಓದಿ : ಬೆಂಗಳೂರಿನ ಪಬ್ಗಳ ಮೇಲೆ ಪೊಲೀಸರ ದಾಳಿ – ಅವಧಿ ಮೀರಿ ಪಬ್, ಬಾರ್ ನಡೆಸುತ್ತಿದ್ದ 15 ಪಬ್ಗಳ ವಿರುದ್ಧ FIR..!