Download Our App

Follow us

Home » ರಾಷ್ಟ್ರೀಯ » 75ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌..!

75ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌..!

ನವದೆಹಲಿ : ದೇಶದಾದ್ಯಂತ 75ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ನಡುವಲ್ಲೇ ವಿಶೇಷ ಡೂಡಲ್‌ ಮೂಲಕ ಗೂಗಲ್ ಶುಭ ಕೋರಿದೆ. ಅನಲಾಗ್ ಟಿವಿಗಳ ಯುಗದಿಂದ ಸ್ಮಾರ್ಟ್‌ಫೋನ್‌ಗಳ ಬಳಕೆಯವರೆಗೆ ದೇಶ ಪರಿವರ್ತನೆಯಾದ ಕಾಲಘಟ್ಟದ ಬಗ್ಗೆ ಗೂಗಲ್ ಹಂಚಿಕೊಂಡಿದೆ.

ಕಾಲ ಕಳೆದಂತೆ ಕಪ್ಪು–ಬಿಳಿಯ ಟಿವಿ ಪರದೆಗಳು ಬಣ್ಣದ ಟಿವಿಗಳಾಗಿವೆ. ಅದರ ನೋಡುಗರು ಮಾತ್ರ ಅದೇ ಹೆಮ್ಮೆಯಿಂದ ವೀಕ್ಷಿಸುತ್ತಿದ್ದಾರೆ ಎಂದು ಗೂಗಲ್‌ ಬರೆದುಕೊಂಡಿದೆ.

‘ಈ ಡೂಡಲ್ ಭಾರತದ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ, ಇದು 1950 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ನೆನಪಿಸುತ್ತದೆ ಮತ್ತು ರಾಷ್ಟ್ರವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿದ ದಿನ’ ಎನ್ನುವ ಮಾಹಿತಿಯನ್ನು ಡೂಡಲ್‌ನಲ್ಲಿ ವಿವರಿಸಿದೆ.

ಕಳೆದ ವರ್ಷ ಕೂಡ ಗೂಗಲ್‌ ಡೂಡಲ್‌ ರಚಿಸುವ ಮೂಲಕ ಭಾರತದ ಗಣರಾಜೋತ್ಸವವನ್ನು ಸಂಭ್ರಮಿಸಿತ್ತು. ರಾಷ್ಟ್ರಪತಿ ಭವನ, ಇಂಡಿಯಾ ಗೇಟ್‌, ಪರೇಡ್‌ನ ದ್ರಶ್ಯವನ್ನು ಡೂಡಲ್​ನಲ್ಲಿ ಗೂಗಲ್ ರಚಿಸಿತ್ತು. ಗೂಗಲ್ ಡೂಡಲ್ ಮಾಡುವ ಮೂಲಕ ಭಾರತದ 75ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗಿಯಾಗಿದೆ. ಅತಿಥಿ ಕಲಾವಿದೆ ವೃಂದಾ ಜವೇರಿ ಅವರು ಈ ಗೂಗಲ್ ಡೂಡಲ್​ನ್ನು ರಚಿಸಿದ್ದಾರೆ.

ಇದನ್ನೂ ಓದಿ : ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ.. ಇಂದಿನಿಂದ ಮೂರು ದಿನ ಈ ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರ ಸ್ಥಗಿತ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here