Download Our App

Follow us

Home » ಅಪರಾಧ » GOOD WILL ವಿರುದ್ಧ ಮಕ್ಕಳ ರಕ್ಷಣಾ ಆಯೋಗ ಕೆಂಡಾಮಂಡಲ – ಇದು ಬಿಟಿವಿ ವರದಿಯ ಬಿಗ್​​​ ಇಂಪ್ಯಾಕ್ಟ್..!

GOOD WILL ವಿರುದ್ಧ ಮಕ್ಕಳ ರಕ್ಷಣಾ ಆಯೋಗ ಕೆಂಡಾಮಂಡಲ – ಇದು ಬಿಟಿವಿ ವರದಿಯ ಬಿಗ್​​​ ಇಂಪ್ಯಾಕ್ಟ್..!

ಬೆಂಗಳೂರು : ಶಿಕ್ಷಣ ಇಲಾಖೆಯಿಂದ ಸೂಕ್ತವಾದ ಅನುಮತಿಯನ್ನು ಪಡೆಯದೇ, ಮಕ್ಕಳಿಂದ ಭಾರೀ ಪ್ರಮಾಣದ ಫೀಸ್ ಸುಲಿಗೆ ಮಾಡಿ ಅಕ್ರಮವಾಗಿ ನಾಗರಭಾವಿಯಲ್ಲಿ ಗುಡ್​ವಿಲ್ ಪಿಯು ಕಾಲೇಜು ನಡೆಸಲಾಗುತ್ತಿತ್ತು. ಈ ಬಗ್ಗೆ ದಾಖಲೆ ಸಮೇತ ಬಿಟಿವಿ ವರದಿ ಮಾಡಿತ್ತು.

GOOD WIL ಕಾಲೇಜಿನ ಅಕ್ರಮದ ಬಗ್ಗೆ ಬಿವಿಟಿ ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಕ್ಕಳ ರಕ್ಷಣಾ ಆಯೋಗ ಕಾಲೇಜು ಆಡಳಿತ ಮಂಡಳಿ ವಿರುದ್ಧ ಗರಂ ಆಗಿದೆ. ಅಕ್ರಮದ ಮಾಹಿತಿ ಪಡೆದ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಬೆಂಗಳೂರಿನ ಗುಡ್​ವಿಲ್​ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಾಲೇಜನ್ನು ಶಾಶ್ವತವಾಗಿ ಮುಚ್ಚಿಸುವ ನಿರ್ಧಾರ ಪ್ರಕಟ ಸಾಧ್ಯತೆಯಿದೆ.

ಈ ಮೊದಲು ಕಾಲೇಜು ಮುಚ್ಚಲು ಶಿಕ್ಷಣ ಇಲಾಖೆ ಶಿಫಾರಸು ಮಾಡಿದ್ದರೂ ನಾಗರಬಾವಿಯ ಕಟ್ಟಡದಲ್ಲಿದ್ದ ಕಾಲೇಜು ಮುಚ್ಚಿ ಮಕ್ಕಳನ್ನು ಬೇರೆಡೆ ಸೇರಿಸಲಾಗಿದೆ. ಆದರೆ ಎಲ್ಲಿ ಮಕ್ಕಳಿಗೆ ತರಗತಿ ನಡೆಸಲಾಗುತ್ತಿದೆ ಎಂಬ ಬಗ್ಗೆ ಆಡಳಿತ ಮಂಡಳಿ ಸಮರ್ಪಕ ಮಾಹಿತಿ ನೀಡಲಿಲ್ಲ. ಹೀಗಾಗಿ ಗುಡ್​ವಿಲ್​ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಬಿಟಿವಿಗೆ ಮಾಹಿತಿ ನೀಡಿದ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಅವರು, ಮಕ್ಕಳನ್ನು ಕಾಲೇಜು ಹೊರಗೆ ಹಾಕಲು ಅಧಿಕಾರ ಇಲ್ಲ. ಮಕ್ಕಳ ರಕ್ಷಣಾ ನೀತಿ 2016ರ ಪ್ರಕಾರ ವಿದ್ಯಾಬ್ಯಾಸಕ್ಕೆ ಅವಕಾಶ ಕೊಡ್ಬೇಕು. ಕಾಲೇಜು ಮುಚ್ಚಲು ಶಿಫಾರಸು ಆಗಿದೆ, ಅನಧಿಕೃತವಾಗಿ ನಡೆಸುತ್ತಿದ್ದಾರೆ. ಇನ್ನು ನಾಳೆಯೇ BEO ಸೇರಿದಂತೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ವಿಚಾರಣೆ ನಡೆಸಲಾಗುತ್ತದೆ. ಮಕ್ಕಳಿಗೆ ಅನ್ಯಾಯವಾಗಿದ್ರೆ FIR ಕೂಡಾ ಮಾಡಲಾಗುತ್ತದೆ. ಒಂದೆರಡು ದಿನದಲ್ಲಿ ಗುಡ್​ವಿಲ್​ ವಿರುದ್ಧ ಸಮನ್ಸ್ ಜಾರಿಯಾಗುತ್ತೆ ಎಂದು ಆಯೋಗದ ಅಧ್ಯಕ್ಷ ನಾಗಣ್ಣಗೌಡ ಬಿಟಿವಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಮಾಡಿದ್ದ ಶಪಥದಂತೆ ಸಿಎಂ ಆಗಿ ವಿಧಾನಸಭೆಗೆ ಎಂಟ್ರಿ..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here