Download Our App

Follow us

Home » ರಾಜ್ಯ » ಆಭರಣ ಪ್ರಿಯರಿಗೆ ಮತ್ತೆ ನಿರಾಸೆ – 70 ಸಾವಿರ ಗಡಿ ದಾಟಿದ ಚಿನ್ನದ ದರ, ಬೆಳ್ಳಿಯೂ ಏರಿಕೆ..!

ಆಭರಣ ಪ್ರಿಯರಿಗೆ ಮತ್ತೆ ನಿರಾಸೆ – 70 ಸಾವಿರ ಗಡಿ ದಾಟಿದ ಚಿನ್ನದ ದರ, ಬೆಳ್ಳಿಯೂ ಏರಿಕೆ..!

ಬೆಂಗಳೂರು : ಸತತ ಎರಡು ದಿನ ಭರ್ಜರಿ ಏರಿಕೆಯಾದ ಚಿನ್ನದ ದರವು 10 ಗ್ರಾಂಗೆ ಸಾರ್ವಕಾಲಿಕ ದಾಖಲೆ ಬರೋಬ್ಬರಿ 70 ಸಾವಿರ ರೂಪಾಯಿ ಗಡಿದಾಟಿದೆ. ಇದು ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಸಂತಸ ತಂದರೆ, ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುವವರಿಗೆ ಆಘಾತ ಉಂಟುಮಾಡಿದೆ.

ಚಿನ್ನ ಹಾಗೂ ಬೆಳ್ಳಿ ದರ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠಕ್ಕೆ ಮುಟ್ಟಿದ್ದು, ಈ ವಾರದಲ್ಲಿ ಮೂರನೇ ಬಾರಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಚಿನ್ನದ ದರವು 10 ಗ್ರಾಂಗೆ ₹850 ಏರಿಕೆಯಾಗಿದ್ದು, ₹70,050ಕ್ಕೆ ಮಾರಟ ಮಾಡಲಾಗುತ್ತಿದೆ. ಬೆಳ್ಳಿ ಧಾರಣೆಯು ಪ್ರತಿ ಕೆ.ಜಿಗೆ ₹1,000 ಹೆಚ್ಚಳವಾಗಿದೆ. ಪ್ರಸ್ತುತ ಒಂದು ಕೆ.ಜಿ ಬೆಳ್ಳಿ ಧಾರಣೆಯು ₹81,700ಕ್ಕೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ.‌

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,297 ಡಾಲರ್‌ ಮತ್ತು 27.05 ಡಾಲರ್‌ನಂತೆ ಮಾರಾಟವಾಗಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ನ ಬಡ್ಡಿದರ ಕಡಿತದ ಅನಿಶ್ಚಿತತೆ ನಡುವೆಯೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ ಮೌಲ್ಯ ದುರ್ಬಲಗೊಳ್ಳುತ್ತಿದೆ. ಇದರಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡಿದ್ದಾರೆ. ಹಾಗಾಗಿ, ಚಿನ್ನದ ದರವು ಏರಿಕೆಯತ್ತ ಸಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರವು ₹70 ಸಾವಿರ ರೂ. ಗಡಿ ದಾಟಿದ್ದು, ಒಂದು ಕೆ.ಜಿ ಬೆಳ್ಳಿಯು ₹81,700 ಆಗಿದೆ.

ಬೆಳ್ಳಿ ದರ ಎಷ್ಟಿದೆ? ಬೆಳ್ಳಿ ದರವು ಕೂಡ ಕಳೆದ ಎರಡು ದಿನಗಳಿಂದ ಪ್ರತಿ ಕೆಜಿಗೆ ಕ್ರಮವಾಗಿ1000 ರೂ ಏರಿಕೆಯಾಗಿದೆ. ಬೆಂಗಳೂರು ಮಾರುಕಟ್ಟೆಯ ಪ್ರಕಾರ, ಬೆಳ್ಳಿಯ ದರ ಏಪ್ರಿಲ್‌ 4 ಕ್ಕೆ 1 ಗ್ರಾಂಗೆ 79.7 ರೂ ಇತ್ತು. ಇದೀಗ, ಕೆಜಿ ಬೆಳ್ಳಿಗೆ 81,700 ರೂ. ತಲುಪಿದೆ. ಇನ್ನು ಕಳೆದ ಮೂರು ತಿಂಗಳಲ್ಲಿ ಪ್ರತಿ ಕೆಜಿಗೆ 3,500 ರೂ. ದರ ಏರಿಕೆಯಾಗಿದೆ.

ಹೂಡಿಕೆ ಮಾಡಿದವರಿಗೆ ಬಂಪರ್‌ ಲಾಭ : ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಸತತ ದರ ಏರಿಕೆಯು ಬಂಪರ್‌ ಲಾಭ ತಂದುಕೊಟ್ಟಿದೆ. ಮೂರೇ ತಿಂಗಳಲ್ಲಿ 10 ಗ್ರಾಂ ಮೇಲೆ 7 ಸಾವಿರವರೆಗೂ, ಒಂದು ವರ್ಷದಲ್ಲಿ 10 ಸಾವಿರ ರೂ. ವರೆಗೂ ದರ ಹೆಚ್ಚಳವಾಗಿ ಲಾಭ ಗಳಿಸಿದ್ದಾರೆ.

ಇದನ್ನೂ ಓದಿ : ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಿದ್ದ ಕೇಸ್ – ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು ದಕ್ಷಿಣ ಘೋಷಣೆ ಬೆನ್ನಲ್ಲೇ ಇಂದು ಮಹತ್ವದ ಸಭೆ ಕರೆದ ಡಿಸಿಎಂ ಡಿಕೆಶಿ..!

ಬೆಂಗಳೂರು : ತೀವ್ರ ವಿರೋಧದ ನಡುವೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ

Live Cricket

Add Your Heading Text Here