Download Our App

Follow us

Home » ರಾಷ್ಟ್ರೀಯ » ಜ್ಞಾನವಾಪಿ ಪ್ರಕರಣ : ಮುಸ್ಲಿಂ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್..!

ಜ್ಞಾನವಾಪಿ ಪ್ರಕರಣ : ಮುಸ್ಲಿಂ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್..!

ಉತ್ತರ ಪ್ರದೇಶ : ಜ್ಞಾನವಾಪಿ ಪ್ರಕರಣ ಸಂಬಂಧ ಮುಸ್ಲಿಂ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಜ್ಞಾನವಾಪಿಯಲ್ಲಿ ಪೂಜೆ ಸಲ್ಲಿಸಲು ಕೋರ್ಟ್​ ಅವಕಾಶ ನೀಡಿತ್ತು, ಪೂಜೆಗೆ ಅವಕಾಶ ನೀಡಿರುವ ಆದೇಶ ಪ್ರಶ್ನಿಸಿ ಮುಸ್ಲಿಂ ಸಮುದಾಯ ಅಲಹಾಬಾದ್​ ಹೈಕೋರ್ಟ್​ ಮೊರೆ ಹೋಗಿದ್ದರು.

ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಇದೀಗ ನಿಮ್ಮ ಅರ್ಜಿಯು ವಿಚಾರಣೆಗೆ ಯೋಗ್ಯವಲ್ಲ ಎಂದು ಕೋರ್ಟ್ ವಜಾ ಮಾಡಿದೆ. ಸಿಂಗಾರಿ ಗೌರಿ, ನಂದಿ ವಿಗ್ರಹದ ಪೂಜೆಗೆ ಕೋರ್ಟ್​ ಅವಕಾಶ ಕಲ್ಪಿಸಿದ್ದು, ಕಾಶಿ ಅರ್ಚಕರಿಗೆ ಬೆಳಗ್ಗೆ, ಸಂಜೆ ಪೂಜೆ ಸಲ್ಲಿಕೆ ಮಾಡಲು ಅವಕಾಶ ಸಿಕ್ಕಿತ್ತು.

ಆದರೆ ವಾರಾಣಸಿ ಕೋರ್ಟ್ ನ​ ಆದೇಶ ಪ್ರಶ್ನಿಸಿ ಮುಸ್ಲಿಂ ಸಮುದಾಯದಿಂದ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿತ್ತು. ದೇಗುಲ ಕೆಡವಿ ಮಸ್ಜಿದ್ ನಿರ್ಮಾಣ​ ಮಾಡಿಕೊಂಡಿದ್ದ ಆರೋಪವಿದ್ದು, ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ತಜ್ಞರು ಸರ್ವೆ ಮಾಡಿ ವರದಿ ಸಲ್ಲಿಸಿದ್ದರು.

ಇದನ್ನೂ ಓದಿ : ಇಂದು ಸುರಪುರ MLA ರಾಜಾ ವೆಂಕಟಪ್ಪ ನಾಯಕ ಅವರ ಅಂತ್ಯ ಸಂಸ್ಕಾರ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here