Download Our App

Follow us

Home » ಸಿನಿಮಾ » ಡಿಜಿಟಲ್​ ಒಟಿಟಿ ಪ್ಲಾಟ್ ಫಾರ್ಮ್​ಗೆ Glopixs ಲಗ್ಗೆ – ಏಕಕಾಲದಲ್ಲಿ 3 ರಾಜ್ಯಗಳಲ್ಲಿ ಲೋಗೋ ಲಾಂಚ್..!

ಡಿಜಿಟಲ್​ ಒಟಿಟಿ ಪ್ಲಾಟ್ ಫಾರ್ಮ್​ಗೆ Glopixs ಲಗ್ಗೆ – ಏಕಕಾಲದಲ್ಲಿ 3 ರಾಜ್ಯಗಳಲ್ಲಿ ಲೋಗೋ ಲಾಂಚ್..!

ಡಿಜಿಟಲ್‌ ಒಟಿಟಿ ವೇದಿಕೆಗೆ ಇದೀಗ ಹೊಸದೊಂದು ಒಟಿಟಿಯ ಆಗಮನವಾಗುತ್ತಿದೆ. ಅದುದೇ Global Pix Incನ ಗ್ಲೋಪಿಕ್ಸ್‌ (Glopixs). ಈ ಹೊಸ ಒಟಿಟಿ ವೇದಿಕೆ ಇದೀಗ ಅಧಿಕೃತವಾಗಿ ಅನಾವರಣಗೊಂಡಿದೆ. ಇತ್ತೀಚೆಗೆ “ಗ್ಲೋಪಿಕ್ಸ್‌”ನ ಲೋಗೋ ಅನಾವರಣವಾಗಿದೆ. ಕರ್ನಾಟಕ, ಕೇರಳ ಹಾಗೂ ಹೈದರಾಬಾದ್​​ನಲ್ಲಿ ಏಕಕಾಲಕ್ಕೆ ಲೋಗೊ ಬಿಡುಗಡೆಯಾಗಿದ್ದು ವಿಶೇಷ.

ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ಹಿರಿಯ ಛಾಯಾಗ್ರಾಹಕ, ಸೆನ್ಸಾರ್ ಬೋರ್ಡ್ ಸದಸ್ಯರಾದ ಶ್ರೀವತ್ಸ ಶಾಂಡಿಲ್ಯ ಲೋಗೊ ಅನಾವರಣ ಮಾಡಿ ನೂತನ ಓಟಿಟಿಗೆ ಶುಭ ಕೋರಿದರು. ಕನ್ನಡ ವಿಭಾಗದ ಕ್ರಿಯೇಟಿವ್ ಹೆಡ್ ಪ್ರತಿಭಾ ಪಟವರ್ಧನ್ ಹಾಗೂ ಫೈನಾನ್ಸ್ ಚೀಫ್ ಅಡ್ವೈಸರ್ ಮಂಜುನಾಥ್ ಪಟವರ್ಧನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಕ್ರಿಯೇಟಿವ್ ಹೆಡ್ ಪ್ರತಿಭಾ ಪಟವರ್ಧನ್ ಅವರು, ಫೌಂಡರ್ ವಿನ್ಸಿ ಹಾಗೂ ಕೋ ಫೌಂಡರ್ ಅನಿತಾ ಅವರ ಮಾರ್ಗದರ್ಶನ ಹೊಸದೊಂದು ಭಾಷ್ಯವನ್ನು ಬರೆಯಲು ಇಂದಿನಿಂದ ಪ್ರಯಾಣ ಆರಂಭವಾಗಿದೆ. ಈಗ ಲೋಗೋ ಬಿಡುಗಡೆ ಆಗಿದ್ದು, ಇದೇ ವರ್ಷದ ಮೇ ತಿಂಗಳಿಂದ ಅಧಿಕೃತವಾಗಿ ಲಾಂಚ್‌ ಆಗಲಿದೆ. Glopixs ಒಟಿಟಿಯಲ್ಲಿ 360-ಡಿಗ್ರಿ ಮನರಂಜನೆ ನೀಡಲು ಉದ್ದೇಶಿಸಲಾಗಿದೆ. ಸಿನಿಮಾ, ವೆಬ್‌ಸಿರೀಸ್‌ಗಳು, ಸುದ್ದಿಗಳು, ಶೋಗಳು. ಹೀಗೆ ಇನ್ನೂ ಹಲವು ಆಯಾಮಗಳಲ್ಲಿ ನೋಡುಗರಿಗೆ ಮನರಂಜನೆಯ ಹೂರಣ ಬಡಿಸಲಿದೆ. Glopixs ಒಟಿಟಿಯ ಲೋಗೋ ಇಂದು ಕರ್ನಾಟಕ, ಕೇರಳ ಹಾಗೂ ಹೈದರಾಬಾದ್​​ನಲ್ಲಿ ಏಕಕಾಲಕ್ಕೆ ಲಾಂಚ್‌ ಆಗಿದೆ ಎಂದರು.

Glopixs ಇದೀಗ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಬಹುಮುಖ್ಯ OTT ವೇದಿಕೆ ಆಗಲು ಸಿದ್ಧವಾಗಿದೆ. ವೈವಿಧ್ಯಮಯ ಕಂಟೆಂಟ್‌ಗಳನ್ನೂ ಇದು ನೀಡಲಿದೆ. ಈ ಒಟಿಟಿ ವೇದಿಕೆಯಲ್ಲಿ ಸಿನಿಮಾಗಳು, ವೆಬ್ ಸರಣಿಗಳು, ಸಾಕ್ಷ್ಯಚಿತ್ರಗಳು, ಸುದ್ದಿಗಳು ಮತ್ತು ರಿಯಾಲಿಟಿ ಶೋಗಳ ಕಂಟೆಂಟ್‌ಗಳು ಸಿಗಲಿದೆ. ಪ್ರಾದೇಶಿಕತೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ಭೋಜ್‌ಪುರಿ, ತಮಿಳು, ಇಂಗ್ಲಿಷ್, ಕನ್ನಡ, ಗುಜರಾತಿ, ಬಂಗಾಳಿ ಮತ್ತು ಮಲಯಾಳಂ ಕಂಟೆಂಟ್‌ಗಳು ವೀಕ್ಷಣೆಗೆ ಸಿಗಲಿವೆ. ವೆಬ್, ಮೊಬೈಲ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ಇದು ಯೂಸರ್‌ ಫ್ರೆಂಡ್ಲಿ ವೇದಿಕೆ ಆಗಿರಲಿದೆ. ಇದಕ್ಕೂ ಮೊದಲು ಜನವರಿ 23ರಂದು ದೆಹಲಿಯಲ್ಲಿ ವಿಶೇಷ ಪತ್ರಿಕಾಗೋಷ್ಠಿ ನಡೆಯಲಿದೆ. Glopixs ಕೇವಲ ಮತ್ತೊಂದು OTT ಪ್ಲಾಟ್‌ಫಾರ್ಮ್ ಅಲ್ಲ. ಇದು ಡಿಜಿಟಲ್ ಮನರಂಜನೆಯ ಹೊಸ ದೃಷ್ಟಿ. ಎಲ್ಲೆಡೆಯ ಪ್ರೇಕ್ಷಕರಿಗೆ ಜಾಗತಿಕವಾಗಿ ಇಷ್ಟವಾಗುವ ಕಂಟೆಂಟ್‌ಗಳನ್ನು ನೀಡುತ್ತದೆ. ಲೋಗೊ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಪ್ರತಿಭಾ ಪಟವರ್ಧನ್ ಧನ್ಯವಾದ ತಿಳಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಛಾಯಾಗ್ರಾಹಕ ಶ್ರೀವತ್ಸ ಲೋಗೊ ಬಿಡುಗಡೆ ಮಾಡಿ “ಗ್ಲೋಪಿಕ್ಸ್” ಓಟಿಟಿಯ ಉದ್ದೇಶ ಚೆನ್ನಾಗಿದೆ. ಈ ಓಟಿಟಿ ದೊಡ್ಡಮಟ್ಟದಲ್ಲಿ ಹೆಸರು ಮಾಡಲಿ, “ಗ್ಲೋಪಿಕ್ಸ್” ನಿಂದ ನಿರ್ಮಾಪಕರಿಗೆ ಅನುಕೂಲವಾಗಲಿ ಎಂದು ಹೇಳಿದರು.

ಇದನ್ನೂ ಓದಿ : ರಾಜ್ಯಕ್ಕೆ ಜೆ.ಪಿ ನಡ್ಡಾ ಆಗಮನ.. ಬಿಜೆಪಿ ಗೊಂದಲಕ್ಕೆ ಮದ್ದು ಅರಿತಾರಾ ವರಿಷ್ಠರು?

Leave a Comment

DG Ad

RELATED LATEST NEWS

Top Headlines

ಮಾಲೂರು ತಹಶೀಲ್ದಾರ್​​​​ ಮತ್ತೊಂದು ಕರ್ಮಕಾಂಡ ರಿವೀಲ್​ – 8 ಕೋಟಿ ಮೌಲ್ಯದ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ!

ಕೋಲಾರ : ಮಾಲೂರು ತಹಶೀಲ್ದಾರ್​​​​ ರಮೇಶ್ ಕುಮಾರ್​​ ಅವರ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಇತ್ತೀಚೆಗಷ್ಟೇ 100 ಕೋಟಿ ಹಗರಣದ ಆರೋಪ ಹೊತ್ತಿದ್ದ ತಹಶೀಲ್ದಾರ್​​​​ ರಮೇಶ್​ ಕುಮಾರ್​​ ವಿರುದ್ಧ

Live Cricket

Add Your Heading Text Here